ರಾಜ್ಯದಲ್ಲಿ ಹೈಟೆಕ್ 'ಬಸ್ ನಿಲ್ದಾಣ' ನಿರ್ಮಿಸಲು ಸಾಧ್ಯವಿಲ್ಲ : ಸಚಿವ ಶ್ರೀರಾಮುಲು
ಬೆಂಗಳೂರು : ರಾಜ್ಯದಲ್ಲಿ ಹೈಟೆಕ್ ಬಸ್ ನಿಲ್ದಾಣ ಗಳನ್ನು ( Bus stand) ನಿರ್ಮಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ( Sri Ramulu )ಹೇಳಿದರು.
ಇಂದು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಶ್ರೀರಾಮುಲು ಜೆಡಿಎಸ್ ಸದಸ್ಯ ಕೆ.
'ಸದ್ಯ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದು, ರಾಜ್ಯದಲ್ಲಿ ಹೈಟೆಕ್ ಬಸ್ ನಿಲ್ದಾಣ ಗಳನ್ನು ನಿರ್ಮಿಸಲು ಸಾಧ್ಯವಿಲ್ಲ' ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ನೌಕರರು ಹಾಗೂ ಸಿಬ್ಬಂದಿ ಕುಟುಂಬಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶಕ್ಕೆ ಸರ್ಕಾರ ಇಲಾಖೆಗೆ 6 ಸಾವಿರ ಕೋಟಿ ಸಾಲ ನೀಡಿದೆ. ಸದ್ಯ. ಸಾರಿಗೆ ಇಲಾಖೆಯ ಎಲ್ಲಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಿಲ್ಲ ಎಂದರು.