ಶಿಕ್ಷಣದಲ್ಲಿ ರಾಜಕೀಯವೇಕೆ ಬೆರಕೆ? ಕನ್ನಡ ಕಡ್ಡಾಯ: ಸರಕಾರಕ್ಕೆ ಹೈಕೋರ್ಟ್‌ ತೀಕ್ಷ್ಣ ಪ್ರಶ್ನೆ

ಶಿಕ್ಷಣದಲ್ಲಿ ರಾಜಕೀಯವೇಕೆ ಬೆರಕೆ? ಕನ್ನಡ ಕಡ್ಡಾಯ: ಸರಕಾರಕ್ಕೆ ಹೈಕೋರ್ಟ್‌ ತೀಕ್ಷ್ಣ ಪ್ರಶ್ನೆ

ಬೆಂಗಳೂರು: ಉನ್ನತ ಶಿಕ್ಷಣ ಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯ ಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯ ಗೊಳಿಸಲು ರಾಷ್ಟ್ರೀಯ ನೀತಿಯಲ್ಲಿ ಅವಕಾಶ ವಿದೆಯೇ? ಇದ್ದರೆ ದಾಖಲೆ ಕೊಡಿ. ಶಿಕ್ಷಣದಲ್ಲಿ ರಾಜಕೀಯವನ್ನು ಏಕೆ ಸೇರಿಸುತ್ತೀರಿ?

ಇದು ಸರಕಾರಕ್ಕೆ ಹೈಕೋರ್ಟ್‌ ಪ್ರಶ್ನೆ.

ರಾಜ್ಯದಲ್ಲಿ ಪದವಿ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಸರಕಾರಕ್ಕೆ ಈ ರೀತಿ ಪ್ರಶ್ನಿಸಿದೆ.

ಸರಕಾರ ತನ್ನ ನೀತಿಯನ್ನು ಸಮರ್ಥಿಸಿ ಕೊಂಡು ಆಕ್ಷೇಪಣೆ ಸಲ್ಲಿಸಿದೆ. ಭಾಷಾ ಕಲಿಕೆ ಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರೋತ್ಸಾ ಹಿಸುತ್ತದೆ. ಈ ಕುರಿತು ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಬೇಕಿದ್ದು, ಸೋಮವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಸರಕಾರದ ಪರ ವಕೀಲರು ಕೋರಿದರು.

ಇದಕ್ಕೆ ನ್ಯಾಯಪೀಠ ಆಕ್ಷೇಪಿಸಿತು. ಸರಕಾರದ ನಿರ್ಧಾರ ಮರು ಪರಿ ಶೀಲಿಸುವ ಬಗ್ಗೆ ಮಾಹಿತಿ ನೀಡುವಂತೆ ಹಿಂದಿನ ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ಗೆಹೇಳಲಾಗಿತ್ತು. ಅದೇನಾಯಿತು? ಭಾಷೆ ಕಲಿಕೆಯನ್ನು ಉತ್ತೇಜಿಸಬಹುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿ ದೆಯೇ ವಿನಾ ಕಡ್ಡಾಯಗೊಳಿಸಬಹುದು ಎಂದಿಲ್ಲ. ಹೀಗಿದ್ದಾಗ ಶಿಕ್ಷಣದಲ್ಲಿ ರಾಜಕೀಯ ಏಕೆ ಸೇರಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಉನ್ನತ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ ಎಂದರು.

ಅಂತಿಮವಾಗಿ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ ಎಂಬ ಸರಕಾರದ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ನ. 15ಕ್ಕೆ ಮುಂದೂಡಿತು.

ಸರಕಾರದ ಸಮರ್ಥನೆ
ಉನ್ನತ ಶಿಕ್ಷಣದಲ್ಲಿ ಕೇವಲ 6 ತಿಂಗಳ ಕಾಲ ಪ್ರಾಥಮಿಕ ಕನ್ನಡ ಕಲಿಸಲಾಗುವುದು. ಸಣ್ಣ ಪುಟ್ಟ ಕನ್ನಡ ಪದ ಕಲಿಯಲು ಹೇಳಿ ಕೊಡಲಾಗುತ್ತದೆಯಷ್ಟೇ. ಇದು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನ. ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಸಂವಾದ ನಡೆಸಲು ಅನುಕೂಲವಾಗುವಷ್ಟು ಕನ್ನಡ ಕಲಿಸಲಾಗುತ್ತದೆ. ಈ ಕ್ರಮವನ್ನು ಉಷಾ ಮೆಹ್ತಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅನುಮೋದಿಸಿದೆ ಎಂದು ಸರಕಾರದ ಪರ ವಕೀಲರು ಸಮರ್ಥಿಸಿಕೊಂಡರು.

10 ವರ್ಷಗಳಿಂದ ಎಂಜಿನಿಯರ್‌ ವ್ಯಾಸಂಗದಲ್ಲಿ ಕನ್ನಡ ಕಲಿಕೆ ಇದೆ. ಇದು 10ನೇ ತರಗತಿ ಅನಂತರ ಕನ್ನಡ ಕಲಿಯ ದವರಿಗೆ ಅನುಕೂಲಕರ. ಈ ವಿಧಾನ ಯಶಸ್ವಿಯೂ ಆಗಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.