ವಿರೂಪಾಕ್ಷ ಮಹಾಸ್ವಾಮಿಜೀವರ ಪಟ್ಟಾಧಿಕಾರದ ದ್ವಿತೀಯ ದಶಮಾನೋತ್ಸವ ಸಮಾರಂಭ

ಮೂರುಸಾವಿರ ವಿರಕ್ತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಮ.ನಿ.ಪ್ರ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳವರ ಪಟ್ಟಾಧಿಕಾರದ ದ್ವಿತೀಯ ದಶಮಾನೋತ್ಸವ ಸಮಾರಂಭ ನಡೆಸಿದ್ರು.ಧಾರವಾಡ ತಾಲೂಕಿನ ಸುಕ್ಷೇತ್ರ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳವರ ಪಟ್ಟಾಧಿಕಾರದ ದ್ವಿತೀಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸಚಿವ ಶಂಕರ್ ಪಾಟೀಲ ಮುನ್ನೆನಕೊಪ್ಪ ಶಾಸಕ ಅಮೃತ ದೇಸಾಯಿ ಅವರು ಭಾಗವಹಿಸಿ, ಪೂಜ್ಯರ ಆಶೀರ್ವಾದ ಪಡೆದರು. ಇನ್ನು ಈ ಸಂದರ್ಭದಲ್ಲಿ ವಿವಿಧ ಪೂಜ್ಯ ಮಠಾಧೀಶರು, ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.