ಹೊಸ ವರ್ಷ ಆಚರಣೆ ಮಾಡಿದ್ರೆ ಧರಣಿ: ಪ್ರಮೋದ್​ ಮುತಾಲಿಕ್​ ಎಚ್ಚರಿಕೆ

ಹೊಸ ವರ್ಷ ಆಚರಣೆ ಮಾಡಿದ್ರೆ ಧರಣಿ: ಪ್ರಮೋದ್​ ಮುತಾಲಿಕ್​ ಎಚ್ಚರಿಕೆ

ಹುಬ್ಬಳ್ಳಿ: ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷ ಆಚರಣೆ ಮಾಡಬಾರದು. ಒಂದು ವೇಳೆ ಮಾಡಿದ್ರೆ ಧರಣಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್​ ಮುತಾಲಿಕ್​, ಹಿಂದುಗಳಿಗೆ ಯುಗಾದಿಯಂದು ಹೊಸ ವರ್ಷ ಆರಂಭವಾಗುತ್ತದೆ.

ಹಾಗಾಗಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡದಂತೆ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಆರ್ಟ್​ ಆಫ್​ ಲಿವಿಂಗ್​ನ ರವಿಶಂಕರ ಗುರೂಜಿ ಹಾಗೂ ಇಸ್ಕಾನ್​ನ ಮಧುದಾಸ ಪಂಡಿತ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡಿದರೆ ಧರಣಿ ನಡೆಸುತ್ತೇವೆ ಎಂದು ಮುತಾಲಿಕ್​ ಎಚ್ಚರಿಸಿದರು.