ಮೊಮ್ಮಕ್ಕಳೊಂದಿಗೆ ಸಿಂಗಾಪುರಕ್ಕೆ ತೆರೆಳಿದ ಬಿಎಸ್​ವೈ; ವಿದೇಶದಲ್ಲಿದ್ದಕೊಂಡೇ ಅಮಿತ್ ಷಾ ಕಾರ್ಯಕ್ರಮದ ವೀಕ್ಷಣೆ

ಮೊಮ್ಮಕ್ಕಳೊಂದಿಗೆ ಸಿಂಗಾಪುರಕ್ಕೆ ತೆರೆಳಿದ ಬಿಎಸ್​ವೈ; ವಿದೇಶದಲ್ಲಿದ್ದಕೊಂಡೇ ಅಮಿತ್ ಷಾ ಕಾರ್ಯಕ್ರಮದ ವೀಕ್ಷಣೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಬಿಡುವಿಲ್ಲ ರಾಜಕೀಯ ಚಟುವಟಿಕೆಗಳಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಚುನಾವಣೆ ಸಮಯ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ಯೋಜನೆಯಂತೆಯೇ ಪ್ರಚಾರ ಆರಂಭಿಸಿವೆ. ಬಿಜೆಪಿ ಪಕ್ಷ ಕೂಡಾ ಚುನಾವಣಾ ಪೂರ್ವಭಾವಿಯಾಗಿ ಒಂದರ ಹಿಂದೆ ಒಂದರಂತೆ ಸಭೆ ಆಯೋಜಿಸುತ್ತಿವೆ.

ಈ ನಡುವೆ ಮಾಜಿ ಸಿಎಂ ಬಿಎಸ್​​ವೈ ತಮ್ಮ ರಾಜಕೀಯ ಚಟುವಟಿಕೆಯಿಂದು ಬಿಡುವು ಪಡೆದುಕೊಂಡಿದ್ದು, ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಬುಧವಾರ (ಡಿ.28) ತಮ್ಮ ಮೊಮ್ಮಕ್ಕಳೊಂದಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಸೋಮವಾರ (ಡಿ.2) ಮತ್ತೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮೆಗಾ ಡೇರಿ ಉದ್ಘಾಟಿಸಿದ್ದರು. ನಂತರ ವಿವಿ ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಸಹಕಾರ ಸಮ್ಮೇಳನದಲ್ಲೂ ಭಾಗವಹಿಸಿದ್ದರು. ಅಮಿತ್ ಷಾ ಅವರ ಕಾರ್ಯಕ್ರಮವನ್ನು ದೂರದ ಸಿಂಗಾಪುರದಲ್ಲಿ ಇದ್ದಕೊಂಡೇ ಬಿಎಸ್​ವೈ ಲೈವ್ ಮೂಲಕ ವೀಕ್ಷಿಸಿದ್ದಾರೆ.