ಕೊತ್ತಂಬರಿ ಸೊಪ್ಪಿನ ನಡುವೆ ಗಾಂಜಾ ಬೆಳೆದು ಸಿಕ್ಕಿಬಿದ್ದ

ಕೊತ್ತಂಬರಿ ಸೊಪ್ಪಿನ ನಡುವೆ ಗಾಂಜಾ ಬೆಳೆದು ಸಿಕ್ಕಿಬಿದ್ದ

ಚಾಮರಾಜನಗರ: ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ ತರಕಾರಿ ಬೆಳೆಯಲೆಂದು ಮಹಿಳೆಯೊಬ್ಬರ ಜಮೀನು ಗುತ್ತಿಗೆ ಪಡೆದು ಕೊತ್ತಂಬರಿ ಸೊಪ್ಪಿನ ಜೊತೆ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ. ಸರೋಜಮ್ಮ ಎಂಬವರ ಜಮೀನು ಪಡೆದು ಹನುಮಗೌಡ ಅದರಲ್ಲಿ ಗಾಂಜಾ ಬೆಳೆದಿದ್ದ. ಜಮೀನಿನಿಂದ 348 ಗ್ರಾಂ. ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರು ದಾಳಿ ನಡೆಸಿದ್ದರು.