ಹಾನಗಲ್ ಬಿಜೆಪಿ ಅಭ್ಯರ್ಥಿ ಪರ ಸಚಿವ ಮುಣಿರತ್ನ ಭರ್ಜರಿ ಪ್ರಚಾರ
ಹಾವೇರಿ ಜಿಲ್ಲೆಯ ಹಾನಗಲ್ ಬೈ ಚುನಾವಣೆಯ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಬಿಗ್ ಪೈಟ್ ನಡೆದಿದ್ದು. ಎರಡು ಪಕ್ಷದ ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಬಾರಿ ಕಸರತ್ತು ನಡೆಸಿದ್ದಾರೆ.ಅದ್ರಂತೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿಳಲಿದ್ದು. ಬಹಿರಂಗ ಪ್ರಚಾರ ಕೊನೆದಿನವಾದ ಇಂದು ಹಾನಗಲ್ ಉಸ್ತುವಾರಿ ಸಚಿವ ಮುನಿರತ್ನ್, ಅವರು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ, ಪರ ರೋಡ್ ಶೋ ಮೂಲಕ ತುರಸಿನ ಪ್ರಚಾರ ನಡೆಸಿದ್ರು. ಇನ್ನು ಅಕ್ಕಿಆಲೂರಿನಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದಲ್ಲಿ ಸಚಿವ ಮುನಿರತ್ನ್ ಬಿಜೆಪಿ ಕಾರ್ಯಕರ್ತರ ಜೊತೆ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಪ್ರಚಾರ ಮಾಡಿದ್ರು. ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ,ಭೂಪಾಲ್ ಪಾಯಣ್ಣವರ, ಪ್ರಚಾರಕ್ಕೆ ಸಾಥ್ ನೀಡಿದ್ರು.