ಹಾಸನ ಜೆಡಿಎಸ್ ಟಿಕೆಟ್ ಫೈಟ್ ವಿಚಾರ : ಇಂದು ಹೆಚ್.ಡಿ. ದೇವೇಗೌಡರಿಂದ ಮಹತ್ವದ ಸಭೆ

ಹಾಸನ ಜೆಡಿಎಸ್ ಟಿಕೆಟ್ ಫೈಟ್ ವಿಚಾರ : ಇಂದು ಹೆಚ್.ಡಿ. ದೇವೇಗೌಡರಿಂದ ಮಹತ್ವದ ಸಭೆ

ಹಾಸನ ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್ ಗೆ ಹಾಸನ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಇದೀಗ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಇಂದು ಹಾಸನದ ಜೆಡಿಎಸ್ ಮುಖಂಡರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪತ್ನಿ ಪರ ರೇವಣ್ಣ ಲಾಬಿ ನಡೆಸಿದರೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ವರೂಪ್ ಪರ ಒಲವು ಹೊಂದಿದ್ದಾರೆ.

ಈ ಹಿನ್ನಲೆಯಲ್ಲಿ ಸ್ವತಃ ಹೆಚ್.ಡಿ. ದೇವೇಗೌಡರೇ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ತೀರ್ಮಾನವನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಹಾಸನ ಜೆಡಿಎಸ್ ಮುಖಂಡರ ಸಭೆ ಬಳಿಕ ಇಂದು ಸಂಜೆ ವೇಳೆಗೆ ಜೆಡಿಎಸ್ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.