Success Story: 6 ವರ್ಷಗಳಲ್ಲಿ 12 ಸರ್ಕಾರಿ ಹುದ್ದೆ; ಅನೇಕರಿಗೆ ಸ್ಪೂರ್ತಿ ಈ ಐಪಿಎಸ್ ಅಧಿಕಾರಿಯ ಯಶೋಗಾಥೆ

Success Story: 6 ವರ್ಷಗಳಲ್ಲಿ 12 ಸರ್ಕಾರಿ ಹುದ್ದೆ; ಅನೇಕರಿಗೆ ಸ್ಪೂರ್ತಿ ಈ ಐಪಿಎಸ್ ಅಧಿಕಾರಿಯ ಯಶೋಗಾಥೆ
ರಾಷ್ಟ್ರದಲ್ಲಿನ ಸಾಕಷ್ಟು ಮಂದಿ ಜೀವನ ಭದ್ರತಾ ದೃಷ್ಟಿಯಿಂದ ಸರ್ಕಾರಿ ಕೆಲಸದ (Government Job) ಮೊರೆ ಹೋಗುತ್ತಾರೆ. ಇದರಲ್ಲಿ ಪ್ರತಿವರ್ಷ ಯುಪಿಎಸ್‍ಸಿ ಪರೀಕ್ಷೆಗಳನ್ನು (UPSC Exam) ನಡೆಸಲಾಗುತ್ತದೆ. ಕೆಲವರು ಪರೀಕ್ಷೆ ತೆಗೆದುಕೊಳ್ಳುವ ಧೈರ್ಯ ಮಾಡಿ ಶ್ರಮಪಟ್ಟು, ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರೂ ಆಗಿ ಜೀವನದಲ್ಲಿ ಯಶಸ್ಸನ್ನೂ ಗಳಿಸುತ್ತಾರೆ.
ಅಂತಹ ಸಾಲಿನಲ್ಲಿ ನಿಲ್ಲುವವರೇ ಪ್ರೇಮ್ ಸುಖ್ ದೇಲು (Prem Sukh Delu). ರಾಜಸ್ಥಾನ ಮೂಲದವರಾದ ಇವರು 6 ವರ್ಷದಲ್ಲಿ 12 ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ.

ಪಟ್ಟಾರಿಯಿಂದ ಐಪಿಎಸ್ (IPS Officer) ಅಧಿಕಾರಿಯಾಗುವವರೆಗಿನ ಪಯಣ
ರಾಜಸ್ಥಾನದ ಬಿಕನೇರ್ ನಿವಾಸಿ ಪ್ರೇಮ್ ಸುಖ್‌ ದೇಲು ರೈತ ಕುಟುಂಬದಲ್ಲಿ ಜನಿಸಿದರೂ, ಕಠಿಣ ಪರಿಶ್ರಮದಿಂದ ಮೊದಲ ಪಟ್ವಾರಿ ಎನಿಸಿಕೊಂಡರು. ಆದರೆ, ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೇ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಐಪಿಎಸ್ ಅಧಿಕಾರಿಯಾದರು.

ಒಂಟೆ ಗಾಡಿಗಳನ್ನು ಓಡಿಸುತ್ತಿದ್ದರು ತಂದೆ

ಪ್ರೇಮ್ ಸುಖ್ ದೇಲು ಕುಟುಂಬದ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿತವಾಗಿರಲಿಲ್ಲ. ಅವರ ತಂದೆ ಒಂಟೆ ಗಾಡಿಗಳನ್ನು ಓಡಿಸುತ್ತಾ ಜನರ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದರು. ಪ್ರೇಮ್ ಬಾಲ್ಯದಿಂದಲೂ ತನ್ನ ಕುಟುಂಬವನ್ನು ಬಡತನಮುಕ್ತ ಮಾಡುವ ಸಲುವಾಗಿ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ವಹಿಸುತ್ತಿದ್ದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿ
ಪ್ರೇಮ್ ಸುಖ್ ದೇಲು ತಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯವರೆಗೆ ದರು, ನಂತರ ಬಿಕನೇರ್‌ನ ಸರ್ಕಾರಿ ಡುಂಗಾರ್ ಕಾಲೇಜಿನಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡರು. ಇತಿಹಾಸದಲ್ಲಿ ಎಂಎ ಮಾಡಿ ಚಿನ್ನದ ಪದಕ ಗಳಿಸಿದರು. ಅದೇ ಸಮಯದಲ್ಲಿ, ಅವರು ಇತಿಹಾಸದಲ್ಲಿ ಯುಜಿಸಿ-ನೆಟ್ ಮತ್ತು ಜೆಆರ್‌ಎಫ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು.

ಪ್ರೇಮ್ ಸುಖ್ ದೇಲು ಹಿರಿಯ ಸಹೋದರ ರಾಜಸ್ಥಾನದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರೇಮ್‍ಗೆ ಸ್ಫೂರ್ತಿ ನೀಡಿದರು. 2010ರಲ್ಲಿ ಪದವಿ ಮುಗಿದ ನಂತರ, ಪಟ್ವಾರಿ ನೇಮಕಾತಿಗೆ ಅರ್ಜಿ ಸಲ್ಲಿಸಿದರು ಮತ್ತು ಯಶಸ್ವಿಯಾದರು. ನಂತರ ಪಟ್ವಾರಿಯಾಗಿ ಕೆಲಸ ಮಾಡುತ್ತಲೇ ಸ್ನಾತಕೋತ್ತರ ಪದವಿಯನ್ನೂ ಪಡೆದು ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಇದನ್ನು : ಅಪ್ಪು ಪುಣ್ಯಸ್ಮರಣೆ, ಶಂಕರ್​ ನಾಗ್ ಜನ್ಮದಿನ; ಚಂದನವನದ ಮರೆಯದ ಮಾಣಿಕ್ಯಗಳು

ಪ್ರತಿ ಸರ್ಕಾರಿ ಪರೀಕ್ಷೆಯಲ್ಲೂ ಯಶಸ್ಸು
ಪಟ್ವಾರಿ ಆದ ನಂತರ, ಪ್ರೇಮ್ ಸುಖ್‌ದೇಲು ರಾಜಸ್ಥಾನ ಗ್ರಾಮ ಸೇವಕ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಗಳಿಸಿದರು. ನಂತರ ರಾಜಸ್ಥಾನದಾದ್ಯಂತ ಸಹಾಯಕ ಜೈಲರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಜೈಲರ್ ಹುದ್ದೆಗೆ ಸೇರುವ ಮೊದಲೇ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಯ ಫಲಿತಾಂಶ ಬಂದು ಆಯ್ಕೆಯಾಗಿದ್ದರು. ಅಷ್ಟಕ್ಕೇ ನಿಲ್ಲದೆ ನೆಟ್ ಮತ್ತು ಬಿ.ಇಡಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆ ಪಡೆದರು. ನಂತರ ಅವರು ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.

ಇದನ್ನು : ನೆಟ್ಟಿಗರ ಮನಗೆಲ್ಲುತ್ತಿದೆ ಈ ಫೋಟೋ; ಪರಿಸರ ಪ್ರೇಮಿ ತುಳಸಿಗೌಡರಿಗೆ ಅಭಿನಂದನೆ ಮಹಾಪೂರ

ಎರಡನೇ ಪ್ರಯತ್ನದಲ್ಲಿ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣ
ಕಾಲೇಜಿನಲ್ಲಿ ಬೋಧನೆ ಮಾಡುತ್ತಲೇ ಪ್ರೇಮ್ ಸುಖ್ ತಮ್ಮ ಅಧ್ಯಯನ ಮುಂದುವರೆಸಿದರು ಮತ್ತು ರಾಜಸ್ಥಾನದ ಆಡಳಿತ ಸೇವೆಗಳ ಅಡಿಯಲ್ಲಿ ತಹಶೀಲ್ದಾರ್ ಆಗಿ ಆಯ್ಕೆಯಾದರು. ತಹಶೀಲ್ದಾರ್ ಹುದ್ದೆಯಲ್ಲಿರುವಾಗಲೇ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಪ್ರೇಮ್ ತನ್ನ ಪಾಳಿ ಕೆಲಸ ಮುಗಿದ ನಂತರ ಅಧ್ಯಯನ ಮಾಡಿದರು ಮತ್ತು 2015ರಲ್ಲಿ ಅವರು ಎರಡನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಎಐಆರ್ 170 ಪಡೆದು ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಅವರು ಗುಜರಾತ್ ಕೇಡರ್ ಪಡೆದರು ಮತ್ತು ಗುಜರಾತ್‍ನ ಅಮ್ರೇಲಿಯಲ್ಲಿ ಎಸಿಪಿಯಾಗಿ ಮೊದಲ ಪೋಸ್ಟಿಂಗ್ ಆಯಿತು.