IMPS ವಹಿವಾಟು ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ RBI
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರ ಅನುಕೂಲಕ್ಕಾಗಿ ಐಎಂಪಿಎಸ್(IMPS) ವಹಿವಾಟಿನ ದೈನಂದಿನ ಮಿತಿಯನ್ನು ಹಿಂದಿನ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಿದೆ. ಡಿಜಿಟಲ್ ವಹಿವಾಟುಗಳನ್ನು(Digital Transaction) ಉತ್ತೇಜಿಸುವ ಸಲುವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಬ್ಯಾಂಕುಗಳ ತಕ್ಷಣದ ಪಾವತಿ ಸೇವೆ (IMPS) ಬಳಕೆಯ ವಹಿವಾಟು ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಿದೆ. RBI ಗವರ್ನರ್ ಶಕ್ತಿಕಾಂತ ದಾಸ್ ಅವರು IMPS ವ್ಯವಸ್ಥೆಯ ಮಹತ್ವ ಹೆಚ್ಚಿಸಲು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಈ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ IMPS ಮಿತಿಯು 2 ಲಕ್ಷ ರೂಪಾಯಿಗಳು ಅಂದರೆ ಬ್ಯಾಂಕ್ ಗ್ರಾಹಕರು ಒಂದು ದಿನದಲ್ಲಿ ಯಾವುದೇ ಅನಿವಾರ್ಯವಿದ್ದಲ್ಲಿ ತಕ್ಷಣ 2 ಲಕ್ಷ ಹಣ ವರ್ಗಾವಣೆ ಮಾಡಬಹುದು. ಐಎಂಪಿಎಸ್ ಮಿತಿಯನ್ನು ಹೆಚ್ಚಿಸುವಂತೆ ಗ್ರಾಹಕರು ಮನವಿ ಮಾಡಿದ್ದರು. ಇದುವರ್ಷಪೂರ್ತಿ ಬ್ಯಾಂಕಿಂಗ್ ವರ್ಗಾವಣೆಗೆ ಅನುಕೂಲ ಮಾಡಿಕೊಡುತ್ತದೆ. ಇದು ಹಣ ವರ್ಗಾವಣೆಯ ವ್ಯವಹಾರಗಳಲ್ಲೂ ಪ್ರಮುಖವಾಗಿದೆ ಎಂದಿದ್ದಾರೆ. ಬ್ಯಾಂಕುಗಳು ಸಹ ಈಗ ಎಲ್ಲಾ ದಿನಗಳಲ್ಲಿ NEFT ಮೂಲಕ ಹಣ ವರ್ಗಾವಣೆಯನ್ನು ಸಹ ಮಾಡುತ್ತದೆ. ಆದರೆ ಈ ವರ್ಗಾವಣೆ ತಕ್ಷಣವೇ ಆಗುವುದಿಲ್ಲ.ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ತಕ್ಷಣವೇ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ (NPCI) IMPS ಸೇವೆಯು ವಾರದ 7 ದಿನ ಹಾಗೂ ದಿನದ 24 ಗಂಟೆ ತ್ವರಿತವಾಗಿ ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುವ ಒಂದು ಪ್ರಮುಖ ಪಾವತಿ ವ್ಯವಸ್ಥೆಯಾಗಿದೆ ಮತ್ತು ಇದನ್ನು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಆಪ್‌ಗಳು, ಬ್ಯಾಂಕ್ ಶಾಖೆಗಳು, ATM ಗಳು ಸೇರಿದಂತೆ ವಿವಿಧ ರೀತಿಯಲ್ಲಿ ಮಾಡಬಹುದಾಗಿದೆ.
; ನಿವೃತ್ತಿ ವೇಳೆಗೆ ₹1 ಕೋಟಿ & ತಿಂಗಳಿಗೆ 27,500 ರೂ. Pension ಸಿಗಬೇಕಾದರೆ ಹೀಗೆ ಮಾಡಿ ಸಾಕು
ಜನವರಿ 2014 ರಿಂದ ಜಾರಿಗೆ ಬಂದಿರುವ ಈ IMPS ನಲ್ಲಿನ ಪ್ರತಿ ವಹಿವಾಟು ಮಿತಿಯನ್ನು ಪ್ರಸ್ತುತ SMS ಮತ್ತು IVRS ಹೊರತುಪಡಿಸಿ ಇತರ ಮೂಲಗಳಿಗೆ ರೂ 2 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. SMS ಮತ್ತು IVRS ವಹಿವಾಟುಗಳಿಗೆ 5,000 ರೂ ಮಿತಿ ಸೀಮಿತಗೊಳಿಸಲಾಗಿದೆ.
ಆರ್‌ಟಿಜಿಎಸ್ ಈಗ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವುದರಿಂದ, ಐಎಂಪಿಎಸ್‌ನ ಸೌಲಭ್ಯದ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ,ಇದರಿಂದಾಗಿ ಕ್ರೆಡಿಟ್ ಮತ್ತು ಯಾವುದೇ ವ್ಯವಹಾರಗಳ ಅಪಾಯಗಳು ಕಡಿಮೆಯಾಗುತ್ತವೆ.
ದೇಶೀಯ ಪಾವತಿ ವಹಿವಾಟುಗಳನ್ನ ಸರಾಗಗೊಳಿಸುವಲ್ಲಿ ಐಎಂಪಿಎಸ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ವಹಿವಾಟಿನ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದು ಡಿಜಿಟಲ್ ಪಾವತಿಗಳಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ರೂ 2 ಲಕ್ಷಕ್ಕಿಂತ ಹೆಚ್ಚಿನ ಡಿಜಿಟಲ್ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಹೆಚ್ಚುವರಿ ಸೌಲಭ್ಯವನ್ನು ಒದಗಿಸುತ್ತದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐನಿಂದ ಬ್ಯಾಂಕ್‌ಗಳಿಗೆ ಅಗತ್ಯ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಏತನ್ಮಧ್ಯೆ, ಆರ್‌ಬಿಐ ಶುಕ್ರವಾರ ಬೆಂಚ್‌ಮಾರ್ಕ್ ಬಡ್ಡಿದರ ಶೇಕಡ 4 ಬದಲಿಸದಿರಲು ನಿರ್ಧರಿಸಿದೆ. ಏಕೆಂದರೆ ಕೊರೊನಾ ಎರಡನೆ ಅಲೆಯ ನಂತರ ಆರ್ಥಿಕತೆಯು ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿದ್ದರೂ ಸಹ ಇನ್ನು ಹೆಚ್ಚಿನ ಸಮಯದ ಅವಶ್ಯಕತೆ ಇದೆ.
: 1 ಸಾವಿರ ರೂಪಾಯಿ ಹೂಡಿಕೆಯಿಂದ ₹26 ಲಕ್ಷ ಗಳಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಎಂಟನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ.