ಗುಜರಾತ್ ಚುನಾವಣೆ; ಮೊದಲ ಹಂತದ ಪ್ರಚಾರ ಮುಕ್ತಾಯ

ಅಹಮದಾಬಾದ್: ತೀವ್ರ ಕುತೂಹಲ ಕೆರಳಿರುವ ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಮಂಗಳವಾರ ಪ್ರಚಾರ ಕಾರ್ಯ ಅಂತ್ಯವಾಗಿದೆ. ಡಿ. 1ರಂದು ಒಟ್ಟು 89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೊರ್ಬಿ, ಕಚ್, ರಾಜ್ಕೋಟ್, ಪೋರ್ಬಂದರ್ ಹಾಗೂ ಜುನಾಗಢ್ನಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 19 ಜಿಲ್ಲೆಗಳಲ್ಲಿ ನಡೆಯಲಿರುವ ಮತದಾನದಲ್ಲಿ 2 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.