ವಿವಿಧ ಕಾಮಗಾರಿಗಳಿಗೆ ಕೃಷಿ ಸಚಿವ ಚಾಲನೆ | Hirekerur |

ಹಿರೇಕೆರೂರು ವಿವಿಧ ಕಾಮಗಾರಿಗಳಿಗೆ ಕೃಷಿ ಸಚಿವ ಬಿಸಿ ಪಾಟೀಲ್ ಚಾಲನೆ ನೀಡಿದರು. ಕೃಷಿ ಸಚಿವ ಬಿಸಿ ಪಾಟೀಲ್, ಉಗ್ರಾಣ ನಿಗಮದ ಅಧ್ಯಕ್ಷ ಯು ಬಿ ಬಣಕಾರ ಅವರು ತಾಲೂಕು ತಿಮಲಾಪುರ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡಿದರು. ನೇಸ್ವಿ ಗ್ರಾಮದಲ್ಲಿ ಆರ್ ಐ ಡಿಎಫ್ ಯೋಜನೆ ಅಡಿ ಶಾಲಾ ಕೊಠಡಿ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಯೋಜನೆಗೆ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್, ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಕಾಯಿಲೆಯನ್ನು ದೂರ ಮಾಡಬಹುದಾಗಿದೆ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶುದ್ಧ ನೀರಿನ ಘಟಕದ ನಿರ್ಮಾಣ ಮಾಡಿದ ರಾಕೇಶ್ ಎಂ ಪಾಟೀಲ್ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಂದ್ರ ಚಳಿಗೇರಿ, ಸದಸ್ಯರಾದ ಲಕ್ಷ್ಮವ್ವ ಇದ್ದರು.