ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದ ಉಪೇಂದ್ರ

ದಿ ಟಾಪ್ ಟೆನ್ಸ್ ಎಂಬ ವೆಬ್ ಸೈಟ್ ಜಗತ್ತಿನ ಎಲ್ಲ ವಿಷಯಗಳ ಕುರಿತು ಸಮೀಕ್ಷೆ ಮಾಡಿ ಅದರಲ್ಲಿ ಟಾಪ್ ಹತ್ತು ವಿಷಯಗಳನ್ನು ಆಯ್ಕೆ ಮಾಡಿದೆ. ಆ ಪೈಕಿ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಸಮೀಕ್ಷೆ ಮಾಡುತ್ತಿದ್ದು, ಕನ್ನಡದ ಉಪೇಂದ್ರ 8ನೇ ಸ್ಥಾನ ಪಡೆದಿರುವುದು ವಿಶೇಷ. ಈ ಪಟ್ಟಿಯಲ್ಲಿಸ್ಥಾನ ಪಡೆದ ಏಕೈಕ ಭಾರತೀಯ ಉಪೇಂದ್ರ. ಮಾತ್ರವಲ್ಲ ಅವರು ಅತೀ ಹೆಚ್ಚು ಕಮೆಂಟ್ ಪಡೆದಿದ್ದಾರೆ. ಸುಮಾರು 4,700 ಕಮೆಂಟ್ ಬಂದಿದೆ.