ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ | Hubli |
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಹುಬ್ಬಳ್ಳಿಯ ರೋಟರಿ ಜಿಲ್ಲಾ 3170 ವಿಭಾಗವು ರೋಟರಿ ರಾಷ್ಟ್ರ ನಿರ್ಮಿತ ಶಿಕ್ಷಕರ ಪುರಸ್ಕಾರ ಕಾರ್ಯಕ್ರಮವನ್ನು ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಸಿತು. ಮುಖ್ಯ ಅತಿಥಿಗಳಾಗಿ ಧಾರವಾಡದ ಡಿಡಿಪಿಐ ಮೋಹನ್ ಎಲ್ ಹಂಚಟೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಜಿಲ್ಲಾ ಗವರ್ನರ್ ಗೌರೀಶ್ ಧೋಂಡ್, ರೋಟರಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮಹೇಶ್ ರಾಯ್ಕರ್ ವಹಿಸಿದ್ದರು. ಇದೇ ವೇಳೆ 100 ಜನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಬ್ಬಳ್ಳಿಯ ಆರು ರೋಟರಿ ಘಟಕಗಳ ಪದಾಧಿಕಾರಿಗಳಾದ ಅನಂತರಾಜ್ ಎನ್ ಭಟ್, ಮಹಿಮಾ ದಂಡ್, ಸುಭಾಷ್ ಚಂದ್ ಹೊಳಾಳ್, ಸುಶೀಲ್ ಲಡ್ಡಾ, ಸಂಜನಾ ಮಹೇಶ್ವರಿ, ಎಂಎಫ್ ಜುಂಜನ್ನಾವರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.