ಮದುವೆ ಸಮಾರಂಭದಲ್ಲಿ 'ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್‌ ಪ್ರತ್ಯಕ್ಷ': 'ಕೈ' ನಾಯಕರಲ್ಲಿ ಅಚ್ಚರಿ

ಮದುವೆ ಸಮಾರಂಭದಲ್ಲಿ 'ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್‌ ಪ್ರತ್ಯಕ್ಷ': 'ಕೈ' ನಾಯಕರಲ್ಲಿ ಅಚ್ಚರಿ

ಬೆಂಗಳೂರು : ಮುಂದಿನ ಚುನಾವಣಾ ಪ್ರಚಾರದಲ್ಲಿ ತೊಡಲು ಕಾಂಗ್ರೆಸ್ ತಿಂಗಳ ಹಿಂದೆ ಪ್ರಜಾಧ್ವನಿ ಬಸ್‌ ಯಾತ್ರೆಗೆ ಚಾಲನೆ ನೀಡಿತ್ತು, ಇದೀಗ ನೆಲಮಂಗಲದ ಮದುವೆ ಸಮಾರಂಭದಲ್ಲಿ ಬಸ್‌ ಪ್ರತ್ಯಕ್ಷಗೊಂಡಿದ್ದು ಕಾಂಗ್ರೆಸ್‌ ನಾಯಕರಲ್ಲಿ ಅಚ್ಚರಿಗೆ ಮೂಡಿಸಿದೆ.

ಕಾಂಗ್ರೆಸ್ ಒಂದು ತಿಂಗಳ ಹಿಂದೆ ಚಾಲನೆ ನೀಡಿದ್ದ ಪ್ರಜಾಧ್ವನಿಯ ಕೆಎ 02 ಎಜಿ 0855 ಬಸ್ ಬಾಡಿಗೆಗೆ ಬಂದಿದ್ದು, ರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಸ್ಸು ಬೆಂಗಳೂರು ಹೊರವಲಯದ ನೆಲಮಂಗಲದ ಕುಣಿಗಲ್ ಬೈಪಾಸ್‍ನ ಕಲ್ಯಾಣ ಮಂಟಪ ಆವರಣದಲ್ಲಿ ಕಂಡು ಮದುವೆ ಮನೆಯಲ್ಲಿದ್ದ ಜನರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ನಾಯಕರು ಮದುವೆ ಆಗಮಿಸಿದ್ದಾರೆ ಅನ್ನೋ ಖುಷಿಯಲ್ಲಿದ್ದರು. ಕಾಂಗ್ರೆಸ್ ಪ್ರಜಾಧ್ವನಿಯ ಸಮಾರಂಭದ ಬಿಡುವಿನ ವೇಳೆಯಲ್ಲಿ ಬಸ್ ಮದುವೆ ಕಾರ್ಯಕ್ರಮಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.