500 ರೂಪಾಯಿಗೆ LPG ಸಿಲಿಂಡರ್ ಗ್ಯಾಸ್; ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ

500 ರೂಪಾಯಿಗೆ LPG ಸಿಲಿಂಡರ್ ಗ್ಯಾಸ್; ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ

ಜೈಪುರ: 1,050 ರೂ.ಗಳ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು 500 ರೂ.ಗಳಿಗೆ ನೀಡುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. ಅಲ್ವಾರ್‌ನಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 1,050 ರೂ.ಗಳಿಗೆ ದೊರೆಯುವ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 500 ರೂ.ಗೆ ನೀಡಲಿದ್ದೇವೆ. ಮುಂದಿನ ಏಪ್ರಿಲ್ 1 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.