ಪ್ರಧಾನಿಗೆ ಹಾರ ಹಾಕೋದಕ್ಕೆ ಬ್ಯಾರಿಕೇಟ್‌ ಹಾರಿ ಬಂದ ಬಾಲಕ : ಮೋದಿ ಬಗ್ಗೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

ಪ್ರಧಾನಿಗೆ ಹಾರ ಹಾಕೋದಕ್ಕೆ ಬ್ಯಾರಿಕೇಟ್‌ ಹಾರಿ ಬಂದ ಬಾಲಕ : ಮೋದಿ ಬಗ್ಗೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

ಹುಬ್ಬಳ್ಳಿ : ನಿನ್ನೆ ಹುಬ್ಬಳ್ಳಿ ಯುವಜನೋತ್ಸವದ ವೇಳೆ ಬ್ಯಾರಿಕೇಟ್‌ ಹಾರಿ ಹಾರ ಹಾಕೋದಕ್ಕೆ ಬಂದ ಬಾಲಕ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

ನಿನ್ನೆ ಹುಬ್ಬಳ್ಳಿ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ರೋಡ್‌ ಶೋ ಮೂಲಕ ಆಗಮಿಸುತ್ತಿದ್ದಂತೆ ಬಾಲಕನೊಬ್ಬ ಬ್ಯಾರಿಕೇಟ್‌ ಹಾರಿ ಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಪ್ರಧಾನಿಗೆ ಹಾರ ಹಾಕೋದಕ್ಕೆ ಓಡಿಹೋಗಿದ್ದಾನೆ.ಈ ಘಟನೆ ಸಂಬಂಧ ಬಾಲಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತನ್ನ ಮನದಾಳದ ಮಾತುಗಳನ್ನ ವ್ಯಕ್ತಪಡಿಸಿದ್ದಾನೆ.

ನನ್ನ ಹೆಸರು ಕುನಲ್‌ ದೋಂಗಡಿ, ನನಗೆ ನರೇಂದ್ರ ಮೋದಿ ಅಂದ್ರೆ ಬಹಳ ಇಷ್ಟ, ಅವರನ್ನು ಹತ್ತಿರದಿಂದ ನೋಡಬೇಕೆಂದು ಬಂದಿದ್ದೆ, ಅವರನ್ನು ಕಂಡು ಹಾರ ಹಾಕೋದಕ್ಕೆ ಓದಿ ಬಂದೆ. ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಅವರು ಭಾಷಣ ಅಂದ್ರೆ ನನಗೆ ಬಹಳ ಇಷ್ಟ, ಅದ್ರಿಂದ ನಾನು ಪ್ರೇರಿಪಿತನಾಗಿದ್ದೇನೆ.

ಮೋದಿ ವ್ಯಕ್ತಿಯಲ್ಲ ಅವರು ದೇವರು, ನಾನು ಎರಡು ವರ್ಷಗಳ ಹಿಂದೆ ಧಾರವಾಡಕ್ಕೆ ಬಂದಾಗ ನೋಡಿದ್ದೆ, ಈಗ ಮತ್ತೆ ಬರುವ ವಿಚಾರ ತಿಳಿದು ಬಂದಿದೇನೆ. ಮೋದಿ ಬಗ್ಗೆ ನನಗೆ ಬಹಳ ಅಭಿಮಾನವಿದೆ, ನನಗೆ ಅವರ ಜೊತೆ ಮಾತನಾಡಬೇಕು. ಪ್ರಧಾನಿಗೆ ಕೈ ಕುಲುಕಬೇಕೆಂದು ಆಸೆ ಇತ್ತು. ಆದ್ರೆ ಅಲ್ಲಿ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ ಆದರೂ ಪರವಾಗಿಲ್ಲ ಮೋದಿ ಎಡ ಕೈ ನನಗೆ ಸ್ಪರ್ಶವಾಗಿದೆ ಅದಕ್ಕೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾನೆ.