ಕನ್ಯಾಕುಮಾರಿಯಲ್ಲಿ ಮಂಗಳೂರರಿನ ಮೀನುಗಾರರ ಮೇಲೆ ಕಲ್ಲು ತೂರಾಟ ಪ್ರಕರಣ; ಮೀನುಗಾರರಿಂದ ದೂರು

ಮಂಗಳೂರು: ಮಂಗಳೂರಿನ ಮೀನುಗಾರ ಬೋಟುಗಳ ಮೇಲೆ ಕಲ್ಲು ಎಸೆದು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರರು ದೂರು ನೀಡಿದ್ದಾರೆ.
ಮಂಗಳೂರಿನ ಬೋಟ್ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ ನಡೆಸಲಾಗಿತ್ತು.
ಮಂಗಳೂರಿನಿಂದ ತೆರಳಿದ್ದ ಬೋಟ್ಗಳನ್ನು ಸಮುದ್ರದ ಮಧ್ಯೆ ತಮಿಳು ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್ಗಳು ಸುತ್ತುವರಿದಿದ್ದವು. ಈ ವೇಳೆ ಆ ಬೋಟ್ಗಳಲ್ಲಿ ಇದ್ದ ಕೆಲವರು ಮಂಗಳೂರಿನ ಬೋಟ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕೃತ್ಯದ ಬಗ್ಗೆ ಮೀನುಗಾರರು ದೂರು ನೀಡಿದ್ದಾರೆ