ಬೀದಿ ನಾಯಿಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರ ಪ್ರಾಣ ಜೊತೆ ಚೆಲ್ಲಾಟವಾಡದಿರಿ

ಬೀದಿ ನಾಯಿಗಳ ಹಾವಳಿಗೆ ರಟ್ಟೀಹಳ್ಳಿ ಜನತೆ ತತ್ತರಿಸಿದ್ದು, ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಕ. ರ. ವೇ ಪ್ರವೀಣ ಶೆಟ್ಟಿ ಬಣವು ಪಟ್ಟಣ ಪಂಚಾಯತಿಗೆ ಮನವಿ ಮಾಡಿದೆ. ಈಗಾಗಲೇ ಬೀದಿನಾಯಿಗಳು ಹತ್ತಾರು ಮಕ್ಕಳಿಗೆ ಕಚ್ಚಿ ಘಾಸಿಗೊಳಿಸಿವೆ. ಶೀಘ್ರದಲ್ಲಿಯೇ ಕ್ರಮತೆಗೆದುಕೊಳ್ಳದಿದ್ದಲ್ಲಿ, ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾದರೆ ಪಟ್ಟಣ ಪಂಚಾಯಿತಿಯವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಠ, ಯುವ ಘಟಕದ ಉಪಾಧ್ಯಕ್ಷ ಯೂಸುಫ್ ಸೈಕಲಗಾರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪ್ರೇಮಾ ಮೂಲಿಮನಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಾಬೀರ್ ಗೋಡಿಯಾಳ್, ಬಾಬುಸಾಬ್ ಹಾವೇರಿ, ಕಾರ್ಯಕರ್ತರು ಉಪಸ್ಥಿತರಿದ್ದರು.