ಊರಿಗೆ ಹೋಗೋಣಾ ಅಂತ ಕರೆದುಕೊಂಡು ಬಂದ್ಲು

ಗದಗ 

ಆತ್ಮಹತ್ಯೆಗೆ ಮೂವರು ಮಕ್ಕಳ ಸಮೇತ ನದಿಗೆ ಹಾರಲು ಯತ್ನಿಸಿದ ತಾಯಿ ಉಮಾ ಜೊತೆ ಇದ್ದ ಮಗು ತನುಶ್ರೀ ನದಿಗೆ ಹಾರಿದ ಸಂದರ್ಭವನ್ನು ವಿವರಿಸಿದ್ದಾಳೆ. ಘಟನೆಯಲ್ಲಿ ಶ್ರೇಯಾ ಎಂಬ ಮಗು ಸಾವನ್ನಪಪಿದ್ದು, ಇನ್ನಿಬ್ಬರು ಮಕ್ಕಳಾದ ತನುಶ್ರೀ, ಪ್ರಿಯಂಕಾ ಬಚಾವ್ ಆಗಿದ್ದರು. ಇದರಲ್ಲಿ ತನುಶ್ರೀಯು ತಾಯಿ ನಮ್ಮನ್ನು ಊರಿಗೆ ಹೋಗೋಣ ಎಂದು ನದಿಗೆ ಹಾರಲು ಕರೆದುಕೊಂಡು ಬಂದರು ಎಂದು ಹೇಳಿದಳು. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.