ಶಿವಮೊಗ್ಗ: ಫೆ.16ರಂದು 'ಸೊರಬ ತಾಲೂಕಿ'ನ ಈ ಪ್ರದೇಶಗಳಲ್ಲಿ 'ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ 16-02-2023ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ( MESCOM ) ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಸೊರಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸೊರಬ ತಾಲೂಕಿನಲ್ಲಿ 110 ಕೆಪಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಸ್ಕಾಂ ನಿಂದ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದಿದೆ.
ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ದಿನಾಂಕ 16-02-2023ರಂದು ಸೊರಬ ನಗರ, ಸಾರೇಕೊಪ್ಪ, ಬಳ್ಳಿಬೈಲು, ಕುಮ್ಮೂರು, ದೇವತಿಕೊಪ್ಪ, ಕಲ್ಲಂಬಿ ಎನ್.ಜಿವೈ, ಕಡಸೂರು ಎನ್ ಜಿವೈ, ನಡಹಳ್ಳಿ, ಬಿಳಗಿ, ಉರಗನಹಳ್ಳಿ, ಅಂಡಿಗೆ, ಕೊಡಕಣಿ, ಯಲ್ಲವಳ್ಳಿ, ಚಿಕ್ಕಲವತ್ತಿ, ಮಂಚಿ, ಹಾಲಗಳಲೆ, ತಳೆಬೈಲು, ಕುಪ್ಪ ಮತ್ತು ಪುರಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಫೆ.16 ಮತ್ತು 17 ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಗರ ಉಪವಿಭಾಗದ -1 ರ ಫೀಡರ್ - 3, 11 ಕೆ.ವಿ ಮಾರ್ಗ ಮುಕ್ತತೆ ನೀಡುವುದರಿಂದ ಫೆ. 16 ಮತ್ತು 17 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವ ಕಾರಣ ವಿದ್ಯಾನಗರ 6ನೇ ಮುಖ್ಯ ರಸ್ತೆ, ಸುಭಾಶ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ವರದಿ: ವಸಂತ ಬಿ ಈಶ್ವರಗೆರೆ