ವಿನಯ ನೋಡಲು ದಾರಿಯಲ್ಲೇ, ಅಭಿಮಾನಿ ಸಾವು...
ನ್ಯಾಯಲಯ ಆದೇಶದಂತೆ ಧಾರವಾಡ ಜಿಲ್ಲೆಯಿಂದ ದೂರ ಉಳಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೆಂಗಳೂರಿನಲ್ಲೆ ವಾಶಿಸುತ್ತಾರೆ. ಅದ್ರಂತೆ ಅವರ ಅಭಿಮಾನಿಗಳು ಅಲ್ಲಿಗೇ ಹೋಗಿ ಕುಲಕರ್ಣಿ ಅವರ ಬೇಟೆಯಾಗಿ ಪೋಟೋ ತೆಗೆದುಕೊಂಡು ಬರುತ್ತಿದ್ದಾರೆ. ಅದೇ ತರಾ ಇಲ್ಲೋಬ್ಬ ಅಭಿಮಾನಿ ವಿನಯ ನೋಡಲು ಬೆಂಗಳೂರು ಹೋಗುವ ದಾರಿಯ ತುಮಕೂರು ಬಳಿ ಹೃದಯ ಆಘಾತದಿಂದ ಸಾವನಪ್ಪಿದ್ದಾರೆ. ಮರೇವಾಡ ಗ್ರಾಮದ ವಿನಯ ಅಭಿಮಾನಿ ಪರಮೇಶ್ವರ ಗಾಣಿಗೇರ ಮೃತ ದುರ್ಧೈವಿ ಆಗಿದ್ದಾರೆ. ಬೆಂಬಲಿಗನ ಸಾವಿನ ಸುದ್ದಿ ತಿಳಿದು ತುಮಕೂರಿಗೆ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಮೃತ ಪಾರ್ಥೀವ ಶರೀರವನ್ನು ಕರಡಿಗುಡ್ಡ ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು...