ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಮೂರು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಭಾರತ ಬಂದ್ ಅನ್ನು ಬೆಂಬಲಿಸಿದ ರಾಯಚೂರಿನ ಎಡಪಕ್ಷಗಳು ಹಾಗೂ ರೈತ ಸಂಘಟನೆಗಳು ನಗರದ ಬಸ್ ನಿಲ್ದಾಣ ಮುಂದಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಕೈಗೊಂಡವು. ಇದೇ ವೇಳೆ ಪ್ರತಿಭಟನಾಕಾರರು ಬಸ್ ಸಂಚಾರ ಸ್ಥಗಿತ ಗೊಳಿಸಲು ಪ್ರಯತ್ನ ಪೆÇಲೀಸರ ಜೊತೆಗೆ ವಾಗ್ವಾದ ಕೂಡ ನಡೆಯಿತು.  ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.