ಮಂತ್ರಾಲಯದಲ್ಲಿ 350ನೇ ರಾಯರ ಪೂರ್ವಾರಾಧನೆ ಸಂಭ್ರಮ
ರಾಯಚೂರು: ಇಲ್ಲಿನ ಮಂತ್ರಾಲಯದಲ್ಲಿ 350ನೇ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಸೋಮವಾರ ಪೂರ್ವಾರಾಧನೆ ವಿಧಿವಿಧಾನ ನಡೆಯುತ್ತಿದೆ.
ಉತ್ಸವರಾಯರ ಪಾದಪೂಜೆ, ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನು ಆಚಾರ್ಯರ ಮಂತ್ರೋಚ್ಚಾರಣೆಯೊಂದಿಗೆ ನೆರವೇರಿಸಲಾಯಿತು. ಕ್ಷೀರ, ಮೊಸರು, ತುಪ್ಪ, ಜೇನುತುಪ್ಪ, ಎಳನೀರು ಹಾಗೂ ಸಕ್ಕರೆಯನ್ನು ವೃಂದಾವನಕ್ಕೆ ಅಭಿಷೇಕ ಮಾಡಿ, ಗಂಧ ಲೇಪನ ಮಾಡಲಾಯಿತು.
ಪಂಚಾಮೃತ ಅಭಿಷೇಕ ನೆರವೇರಿಸುವುದನ್ನು ಕಣ್ಮುಂಬಿಕೊಳ್ಳಲು ಮಠದ ಪ್ರಾಕಾರದಲ್ಲಿ ಭಕ್ತರು ಕುಳಿತಿದ್ದರು. ಪ್ರಾಕಾರದಲ್ಲಿ ವಿಶಾಲವಾದ ಎಲ್ ಇಡಿ ಅಳವಡಿಸಿದ್ದು, ಪೂಜಾಕಾರ್ಯಗಳೆಲ್ಲ ನೇರವಾಗಿ ವೀಕ್ಷಿಸಲು ಅವಕಾಶ ಮಾಡಲಾಗಿದೆ.