ಉತ್ತಮ ವರದಿಗಾರಿಕೆಯಲ್ಲಿ ಪ್ರಶಸ್ತಿ ಪಡೆದ ಶ್ರೀಧರ್ ಮುಂಡರಗಿ.
ಹುಬ್ಬಳ್ಳಿ.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಲಾಗುವ ಉತ್ತಮ ವರದಿಗಾರಿಕೆ ಮತ್ತು ಉತ್ತಮ ಕ್ಯಾಮರಾಮನ್ ಪ್ರಶಸ್ತಿಯನ್ನ ಈ ನ್ಯೂಸ್ ಫಸ್ಟ್ ನ ಹುಬ್ಬಳ್ಳಿಯ ಪ್ರತಿನಿಧಿ ಶ್ರೀಧರ್ ಮತ್ತು ಕ್ಯಾಮರಾಮನ್ ಪ್ರಕಾಶ್ ಮುಳ್ಳೊಳ್ಳಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರತಿ ವರ್ಷವೂ ಧಾರವಾಡ ಕಾರ್ಯನಿರತ ಸಂಘದಿಂದ ಉತ್ತಮ ಪತ್ರಕರ್ತರನ್ನ ಗುರುತಿಸಿ ಈ ಪ್ರಶಸ್ತಿ ಕೊಡಲಾಗುತ್ತಿದ್ದು, ಈ ವರ್ಷ ನ್ಯೂಸ್ ಫಸ್ಟ್ ಗೆ ಎರಡು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ್ ಅಬ್ಬಯ್ಯ ಮತ್ತು ಹುಡಾ ದ ಅಧ್ಯಕ್ಷ ನಾಗರಾಜ ಕಲಬುರ್ಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನಿಸಿದರು.