ಕವಲಗೇರಿ ಸುತ್ತಮುತ್ತಲೂ ಚಿರತೆ,ದೆ ಹವಾ
ಕಳೆದ 15,ದಿನಗಳಿಂದ ಅವಳಿನಗರದ ಜನತೆ ಚಿರತೆ ಭಯಬೇತ ರಾಗಿದ್ದಾರೆ. ಮೊದಲು ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ, ಅನಂತರ ನಾಲ್ಕು ದಿನಗಳ ಹಿಂದೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆ ಪತ್ತೆಯಾಗಿದೆ. ಜಮೀನಿಗೆ ಹೋಗುವ ರೈತರು ನೋಡಿ ಭಯ ಬೀತರಾಗಿದ್ದರು. ಅನಂತರ ಅರಣ್ಯ ಅಧಿಕಾರಿಗಳ ಮಾಹಿತಿ ತಿಳಿಸಿದ ಬೆನ್ನಲ್ಲೇ ಅರಣ್ಯ ಅಧಿಕಾರಿ ಉಪ್ಪಾರ ಅವರ ತಂಡ ಹಗಲು ರಾತ್ರಿ ಅನ್ನದೆ ಚಿರತೆ ಹಿಡಿಯಲು ಸಾಕಷ್ಟು ಕಾರ್ಯಚರಣೆ ನಡೆಸಿದ್ದಾರೆ. ನಿನ್ನೆ ರಾತ್ರಿ ಕೂಡಾ ನಾಲ್ಕನೇ ದಿನದಂದು ಚಿರತೆ ಸೆರೆಹಿಡಿಯಲು ಸಕಲ ಪ್ರಯತ್ನಗಳನ್ನು ಅಧಿಕಾರಿಗಳು ನಡೆಸಿದ್ರು