ಧಾರವಾಡದಲ್ಲಿ ಖೋಟಾ ನೋಟು ಚಲಾವಣೆ ಯತ್ನ ನಾಲ್ವರ ಬಂಧನ
ಖೋಟಾ ನೋಟು ಚಲಾವಣೆ ಯತ್ನದಲ್ಲಿ ಧಾರವಾಡದಲ್ಲಿ ಪೊಲೀಸ್ ದಾಳಿಗೆ ಸಿಕ್ಕ ನಾಲ್ವರಿಂದ 500 ಮುಖಬೆಲೆಯ 35 ಖೋಟಾನೋಟುಗಳು ವಶಕ್ಕೆ ಪಡೆದ ಪೊಲೀಸರು. ಧಾರವಾಡ ಕೆಲಗೆರಿಯಲ್ಲಿ ಈ ಚಲಾವಣೆ ಯತ್ನ ನಡೆದಿದ್ದು ಅದರ ವಾಸನೆ ಉಪನಗರ ಠಾಣೆ ಪೊಲೀಸರಿಗೆ ಬಡೆದಿದ್ದು ನಿಖರ ಮಾಹಿತಿ ಆಧರಿಸಿ ಉಪನಗರ ಠಾಣೆ ಪೊಲೀಸರ ದಾಳಿ ನಡೆಸಿದ್ದು ಸಂತೋಷ ಭೋವಿ, ರವಿ ಔರಾದಿ, ಪ್ರಜ್ವಲ ಭೋವಿ, ಮಂಜು ಬಳಗಾರ ಎಂಬುವವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರೂ ಧಾರವಾಡ ತಾಲೂಕಿನ ಮುಗದ ಗ್ರಾಮದವರು ಎಂದು ತಿಳಿದುಬಂದಿದ್ದು ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.