ಶಿವಕುಮಾರ್‌ ಸಿದ್ದರಾಮಯ್ಯ ಫೋಟೊ ಫ್ರೆಂಡ್ಸ್: ಶ್ರೀರಾಮುಲು ವ್ಯಂಗ್ಯ

ಶಿವಕುಮಾರ್‌ ಸಿದ್ದರಾಮಯ್ಯ ಫೋಟೊ ಫ್ರೆಂಡ್ಸ್: ಶ್ರೀರಾಮುಲು ವ್ಯಂಗ್ಯ

ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ದೆಹಲಿಗೆ ಹೋದಾಗ ಸ್ನೇಹಿತರಂತೆ ಇರುತ್ತಾರೆ. ರಾಜ್ಯಕ್ಕೆ ಮರಳಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಗಿಳಿಯುತ್ತಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಟೀಕಿಸಿದರು.

'ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎದುರು ಮಾತ್ರ ಕೈಕುಲುಕುತ್ತಾರೆ. ಅವರ ಎದುರು ಫೋಟೊ ಫ್ರೆಂಡ್ಸ್ ಆಗಿರಲಿದ್ದು, ಹೊರಗೆ ಬಂದಾಗ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹಗಲು ಕನಸು ಕಾಣುತ್ತಾರೆ' ಎಂದು ವ್ಯಂಗ್ಯವಾಡಿದರು.

'ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಲಾಭದತ್ತ ಕೊಂಡೊಯ್ಯಲು ಕೆಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ತೈಲ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಇಲೆಕ್ಟ್ರಿಕ್ ಬಸ್ ಓಡಿಸಿದರೆ ಹೇಗೆ ಎನ್ನುವ ಕುರಿತು ಮುಖ್ಯಮಂತ್ರಿ ಹಾಗೂ ಕೇಂದ್ರದ ಜೊತೆ ಚರ್ಚಿಸಲಾಗಿದೆ' ಎಂದರು.