ಬಿಹಾರದಲ್ಲಿ ಬಾಂಬ್ ಸ್ಪೋಟ ಯತ್ನ: ದಕ್ಷಿಣ ಕನ್ನಡದ ಹಲವೆಡೆ ಎನ್‌ಐಎ ದಾಳಿ

ಮಂಗಳೂರು: ಬಿಹಾರದ ಪಟ್ನಾದಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್ ಐಎ ತಂಡ ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ನಂದಾವರದ ಕೆಲವೆಡೆ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿದೆ.
ನಂದಾವರದ ಮೂವರ ಮನೆಗೆ ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಲಾಗಿದೆ. ಪಾಣೆಮಂಗಳೂರು ಮತ್ತು ಮೆಲ್ಕಾರಿನ ಸೈಬರ್ ಸೆಂಟರ್‌ಗಳಿಗೂ ದಾಳಿ ನಡೆಸಲಾಗಿದೆ. ಅಲ್ಲದೆ ಪುತ್ತೂರು ಬೆಟ್ಟಂಪಾಡಿ ಇರ್ದೆಯ ರಫೀಕ್ ಎಂಬಾತನನ್ನು ಬಂಧಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸಾಯಂಕಾಲ ವೇಳೆ ಹತ್ತಾರು ಪೊಲೀಸ್ ವಾಹನಗಳು ನಂದಾವರಕ್ಕೆ ಆಗಮಿಸಿದಾಗ ಸ್ಥಳೀಯರಲ್ಲಿ ಆತಂಕ ಮೂಡಿತ್ತು.