ಕ್ರಿಕೆಟ್‌ ವೇಳೆ ಕಿರಿಕ್‌ ಡಬಲ್‌ ಮರ್ಡರ್‌ ಪ್ರಕರಣ : ಸಾಂತ್ವಾನ ಹೇಳಲು ಬಂದ ಸಚಿವ ಎಂಟಿಬಿಗೆ ತರಾಟೆ

ಕ್ರಿಕೆಟ್‌ ವೇಳೆ ಕಿರಿಕ್‌ ಡಬಲ್‌ ಮರ್ಡರ್‌ ಪ್ರಕರಣ : ಸಾಂತ್ವಾನ ಹೇಳಲು ಬಂದ ಸಚಿವ ಎಂಟಿಬಿಗೆ ತರಾಟೆ

ಬೆಂಗಳೂರು ಗ್ರಾಮಾಂತರ : ನಗರದಲ್ಲಿ ಕ್ರಿಕೆಟ್‌ ವೇಳೆ ಕಿರಿಕ್‌ ಡಬಲ್‌ ಮರ್ಡರ್‌ ಪ್ರಕರಣ ಸಂಬಂಧ ಕುಟುಂಬಸ್ಥರ ಪ್ರತಿಭಟನಾ ಸ್ಥಳಕ್ಕೆ ಸಚಿವ ಎಂಟಿಬಿ ನಾಗರಾಜು ಆಗಮಿಸಿ, ಸಾಂತ್ವಾನ ಹೇಳಲು ಬಂದ ವೇಳೆ ತರಾಟೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ನಿನ್ನೆಕ್ರಿಕೆಟ್‌ ಆಡುವಾಗ ಕಿರಿಕ್‌ ಆಗಿದ್ದಕ್ಕೆ ಚಾಕುವಿನಿಂದ ಇರಿದು ಇಬ್ಬರು ಯುವಕರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆ ಸಂಬಂಧ ಈ ವರೆಗೆ ಹತ್ಯೆಗೈದ ಆರೋಪಿಗಳನ್ನು ಬಂದಿಸಿಲ್ಲ.ಕೂಡಲೇ ಬಂಧನ ಮಾಡಿ ನಮಗೆ ನಿಮ್ಮ ಸಾಂತ್ವಾನ ಬೇಡ. ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವೇಳೆ ಕುಟುಂಬಸ್ಥರ ಪ್ರಶ್ನೆಗೆ ಉತ್ತರಿಸಲಾಗದೇ ಸಚಿವ ಎಂಟಿಬಿ ಮೌನವಹಿಸಿದ್ದಾರೆ. ಘಟನೆ ಹಿನ್ನೆಲೆ ದೊಡ್ಡಬಳ್ಳಾಪುರ- ತುಮಕೂರು ರಸ್ತೆಯನ್ನು ತಡೆದು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗಿವಿನ ವಾತಾವರಣ ಉಂಟಾಗಿದೆ.

ಕ್ರಿಕೆಟ್‌ ವೇಳೆ ಕಿರಿಕ್‌ ಡಬಲ್‌ ಮರ್ಡರ್‌ ಪ್ರಕರಣ :

ಕ್ರಿಕೆಟ್‌ ಆಡುವಾಗ ಕಿರಿಕ್‌ ಆಗಿದ್ದಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಇಬ್ಬರ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿತ್ತು. ದೊಡ್ಡಬೆಳವಂಗಲ ಗ್ರಾಮದ ಭರತ್‌, ಪ್ರತೀಕ್‌ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ . ಫೆ .17ರಂದು ಶಿವರಾತ್ರಿ ಹಬ್ಬ ಪ್ರಯುಕ್ತ ಕ್ರಿಕೆಟ್‌ ಟೂರ್ನಮೆಂಟ್‌ ಬಿಜೆಪಿ ಮುಖಂಡನ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಕಾರು ನಿಲ್ಲಿಸುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ತಾರಕ್ಕೇರಿದ್ದು. ಈ ವೇಳೆ ಯುವಕರ ನಡುವೆ ಮಾರಾಮಾರಿ ನಡೆದಿತ್ತು. ಇಬ್ಬರನ್ನುಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ರು. ಈಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ