ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ಮಹಾರಾಷ್ಟ್ರ ಕನ್ನಡಿಗರು; ಮಹಾ ಸರ್ಕಾರಕ್ಕೆ ನಿರಂತರ ಆಘಾತ!

ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ಮಹಾರಾಷ್ಟ್ರ ಕನ್ನಡಿಗರು; ಮಹಾ ಸರ್ಕಾರಕ್ಕೆ ನಿರಂತರ ಆಘಾತ!

ಚಿಕ್ಕೋಡಿ: ಗಡಿ ವಿಚಾರದಲ್ಲಿ ಸದಾ ಮೂಗು ತೂರಿಸಿ ಕಿರಿಕಿರಿ ಮಾಡುತ್ತಿದ್ದ ಮಹಾ ಸರ್ಕಾರಕ್ಕೆ ಈಗ ಆಘಾತಗಳ ಸರಮಾಲೆಯನ್ನೇ ಎದುರಿಸ ಬೇಕಾಗಿದೆ. ಬೆಳಗಾವಿ ಕಾರವಾರ ನಿಪ್ಪಾಣಿ ಬೇಕು ಎನ್ನುತ್ತಿದ್ದ ಪುಂಡರಿಗೆ ಜತ್ತ ತಾಲೂಕಿನ ಜನರೇ ಶಾಕ್​ ನೀಡಿದ್ದು ಈಗ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಕರ್ನಾಟಕದ ಹೊಸ ನಕ್ಷೆ ತಯಾರು ಮಾಡಿ ಆಘಾತ ನೀಡಿದ್ದಾರೆ.

ಸದ್ಯ ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿರುವ ಮಹಾ ಕನ್ನಡಿಗರು ಹೊಸ ನಕ್ಷೆಯನ್ನು ತಯಾರು ಮಾಡಿದ್ದಾರೆ. ಪ್ರಸ್ತುತ ಇರುವ ನಕ್ಷೆಗೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಹೊಸ ನಕ್ಷೆ ತಯಾರು ಮಾಡಲಾಗಿದೆ. ಈ ಹೊಸ ನಕ್ಷೆ ಗಡಿಭಾಗದಲ್ಲಿ ವೈರಲ್ ಆಗುತ್ತಿದೆ.

ಈ ನಕ್ಷೆಯಲ್ಲಿ ಕರ್ನಾಟಕಕ್ಕೆ ಸೋಲಾಪುರ, ಉಸ್ಮನಬಾದ್​, ಲಾತೂರು, ಸಂಗಲ್ಕಿ ಮತ್ತು ಕೊಲ್ಹಾಪುರ ಜಿಲ್ಲೆಗಳನ್ನು ಸೇರಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾ ಸರ್ಕಾರ ಯಅವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದು ಕುತೂಹಲಕಾರಿ ವಿಷಯ.