ಯಾರೇ ಆದ್ರು ಮಹಿಳೆಯರಿಗೆ ಗೌರವ ಕೋಡಬೇಕು ಸಚಿವ ಬಿಸಿ ಪಾಟೀಲ.
ಧಾರವಾಡ
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಸಂಜಯ ಪಾಟೀಲ ಹೇಳಿಕೆ ನೀಡಿದ್ದು ಸರಿಯಲ್ಲ, ಓರ್ವ ಹೆಣ್ಣು ಮಗಳ ಬಗ್ಗೆ ಆ ರೀತಿ ಮಾತನಾಡಬಾರದು. ಆದರೆ ಅವರು ಏನು ಹೇಳಿದ್ದಾರೆಯೋ ನನಗೆ ಗೊತ್ತಿಲ್ಲ,ಯಾಕೆಂದರೆ ನಿನ್ನೆ ಬೆಳಗಾವಿಯಲ್ಲಿದ್ದರೂ ಹಳ್ಳಿಗಳಲ್ಲಿದ್ದೆ, ಅವರು ಏನು ಹೇಳಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡಲಿ, ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲದೆ ಪ್ರತಿಕ್ರಿಯೆ ಕೊಡೊದು ಸರಿಯಲ್ಲ, ಯಾರೇ ಆದರೂ ಮಹಿಳೆಯರ ಬಗ್ಗೆ ಗೌರವ ಇಟ್ಟು ಮಾತನಾಡಬೇಕು ಎಂದು ಕೃಷಿ ಸಚಿವ ಬಿಸಿ ಪಾಟೀಲ ಹೇಳಿದ್ದಾರೆ..ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಗಲ್ ಉಪ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆಯುವ ಸಭೆಯಲ್ಲಿ ಮಾಹಿತಿ ಹಾಗೂ ಟಿಕೆಟ್ ಅಕಾಂಕ್ಷಿ ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕರಿಸಲಾಗುವುದು. ಬಳಿಕ ಅಭ್ಯರ್ಥಿಗಳ ಅರ್ಜಿ ಹಾಗೂ ಮಾಹಿತಿಗಳನ್ನು ಪಕ್ಷದ ಹೈಕಮಾಂಡಗೆ ಕಳುಹಿಸಿ ಕೋಡುತ್ತೇವೆ. ಇನ್ನು ಬೆಳೆ ಪರಿಹಾರ ವಿಳಂಬ ಕುರಿತು ಮಾತನಾಡಿದ ಅವರು, 2021 ಬೆಳೆ ಪರಿಹಾರ ಅಷ್ಟೇ ಬಾಕಿ ಇರೋದು ಆದಷ್ಟು ಬೇಗ ಅದನ್ನು ಬಿಡುಗಡೆ ಮಾಡಲಾಗುವುದು. ನಾನು ಕೃಷಿ ಮಂತ್ರಿ ಆದಮೇಲೆ ಯಾವುದನ್ನೂ ಫೆಂಡಿಂಗ್ ಇಟ್ಟಿಲ್ಲ. ಎಲ್ಲ ಬಾಕಿ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು.