ಸಾಲದಿಂದ ತಪ್ಪಿಸಿಕೊಳ್ಳಲು ಫೇಸ್ಬುಕ್ನಲ್ಲಿ ಸತ್ತಂತೆ ಫೋಟೋ ಹಾಕಿದ ಮಹಿಳೆ

ಇಂಡೊನೇಷ್ಯಾ: ಸಾಲ ಮರುಪಾವತಿ ಮಾಡಲು ಆಗದೇ ಇರುವವರು ಸಾವಿರಾರ ರೀತಿ ನಾಟಕ ಮಾಡುವುದನ್ನು ನಾವು ನೋಡಿದ್ದೇವೆ. ಕೆಲವರು ದೇಶ ಬಿಟ್ಟು ಓಡಿ ಹೋದರೆ ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ನಾಪತ್ತೆಯಾಗುತ್ತಾರೆ. ಆದರೆ ಈ ಮಹಿಳೆ ಮಾತ್ರ ತಾನು ಸತ್ತಿರುವ ರೀತಿ ಫೋಟೊ ಹೊಡೆದು ಫೇಸ್ಬುಕ್ನಲ್ಲಿ ಹಾಕಿದ್ದಾಳೆ!
ಇಂಡೋನೇಷ್ಯಾದ ಲಿಜಾ ದೇವಿ ಪ್ರಮಿತಾ ಎಂಬ ಮಹಿಳೆ, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಲು ಸತ್ತಿರುವ ನಾಟಕ ಮಾಡಿದ್ದಾಳೆ. ಆಕೆ ಶವದ ರೀತಿ ವೇಷ ಹಾಕಿದ್ದು ಮಗಳ ಸಹಾಯದಿಂದ ಫೋಟೋ ತೆಗೆಸಿಕೊಂಡಿದ್ದಾಳೆ. ನಂತರ ಆಕೆಯ ಮಗಳು ಆ ಫೋಟೊಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾಳೆ.
ಆದರೆ ಸಾಲ ನೀಡಿದವರಿಗೆ ಆಕೆಯ ಅಚಾನಕ್ ಸಾವಿನಿಂದಾಗಿ ಅನುಮಾನ ಮೂಡಿದ್ದು ಈ ಪೋಸ್ಟ್ ಹಿಂದಿನ ಸತ್ಯಾಂಶವನ್ನು ಪರಿಶೀಲಿಸಿದ್ದಾರೆ. ಆಗ ನಿಜ ವಿಷಯ ಬೆಳಕಿಗೆ ಬಂದಿದೆ.
ಮಾಯಾ ಗುಣವಾನ್ ಎನ್ನುವಾತ, ಪ್ರಮಿತಾಗೆ 22,000 ರೂ.ಸಾಲ ನೀಡಿದ್ದರು. ಹಣವನ್ನು ಮರುಪಾವತಿಸಲು ಸಾಧ್ಯವಾಗದ ಪ್ರಮಿತಾ ತನ್ನ ಸಾಲವನ್ನು ಮರುಪಾವತಿ ಮಾಡಲು ಇನ್ನಷ್ಟು ಸಮಯ ಕೇಳಿದ್ದಾಳೆ. ಆದರೆ, ಎರಡನೇ ಗಡುವು ಸಮೀಪಿಸುತ್ತಿದ್ದಂತೆ, ಆಕೆ ಈ ವಿಲಕ್ಷಣವಾದ ಟ್ರಿಕ್ ಮಾಡಿದ್ದಾರೆ. ಸದ್ಯ ಪ್ರಮಿತಾ ತಲೆಮರೆಸಿಕೊಂಡಿದ್ದು ಗುಣವಾನ್ಗೆ ಇನ್ನೂ ಕೊಟ್ಟ ಹಣ ವಾಪಸ್ ಸಿಕ್ಕಿಲ್ಲ.