ದೆಹಲಿಯ ಎರಡನೇ ಟೆಸ್ಟ್ ಗೂ ಮುನ್ನ ಹೊರಬಿತ್ತು ಅಭಿಮಾನಿಗಳ ಮನ ನೋಯಿಸುವ ಸುದ್ದಿ!

ದೆಹಲಿಯ ಎರಡನೇ ಟೆಸ್ಟ್ ಗೂ ಮುನ್ನ ಹೊರಬಿತ್ತು ಅಭಿಮಾನಿಗಳ ಮನ ನೋಯಿಸುವ ಸುದ್ದಿ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಫೆಬ್ರವರಿ 17-21 ರವರೆಗೆ ದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ. ದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಅಭಿಮಾನಿಗಳ ಹೃದಯವನ್ನು ಒಡೆಯುವ ಕೆಟ್ಟ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 17 ರಂದು ಶುಕ್ರವಾರ ಪ್ರಾರಂಭವಾಗಲಿದ್ದು, ಕಿಕ್ಕಿರಿದ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂಬುದು ಮಾತ್ರ ಖಚಿತವಾಗಿದೆ. ಅದಕ್ಕೆ ಕಾರಣವೂ ಇದೆ.

ಡಿಸೆಂಬರ್ 2017 ರ ಬಳಿಕ ದೆಹಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಯೋಜನೆ ಮಾಡುತ್ತಿದೆ. ಭಾರತ ತಂಡ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಮೂರು ದಿನಗಳ ಅಂತರದಲ್ಲಿ ಗೆದ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯೊಂದು ಅಭಿಮಾನಿಗಳ ಹೃದಯವನ್ನು ಒಡೆಯುವಂತೆ ಮಾಡಿದೆ.

ಡಿಡಿಸಿಎ (ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ) ಜಂಟಿ ಕಾರ್ಯದರ್ಶಿ ರಾಜನ್ ಮಂಚಂಡ ಮಂಗಳವಾರ ಪಿಟಿಐಗೆ ಮಾಹಿತಿ ನೀಡಿದ್ದು, "ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ನಾವು ಕ್ಕಿಕಿರಿದ ಮೈದಾನವನ್ನು ನೋಡಲಿದ್ದೇವೆ. ಬಹಳ ದಿನಗಳ ನಂತರ ದೆಹಲಿಯಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಪಂದ್ಯದ ಮೇಲೆ ಭಾರೀ ಕುತೂಹಲ ಮೂಡಿದೆ" ಎಂದು ಹೇಳಿದ್ದಾರೆ.

ಎರಡನೇಟೆಸ್ಟ್ ಪಂದ್ಯ ದಎಲ್ಲಾ ಟಿಕೆಟ್‌ಗಳು ಮಾರಾಟವಾದ ಕಾರಣ, ಈ ಅವಕಾಶವನ್ನು ಕಳೆದುಕೊಂಡ ದೆಹಲಿಯ ಅಭಿಮಾನಿಗಳು ತುಂಬಾ ದುಃಖಿತರಾಗಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣವು 40,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಪಂದ್ಯಕ್ಕಾಗಿ 24,000 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಡಿಡಿಸಿಎ ಸದಸ್ಯರಲ್ಲಿ 8000 ಟಿಕೆಟ್‌ಗಳನ್ನು ವಿತರಿಸಲಾಗಿದೆ. ಉಳಿದ ಆಸನಗಳನ್ನು ಆಟದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಬಳಸಲಾಗುತ್ತದೆ. ಪಂದ್ಯದ ಸಮಯದಲ್ಲಿ ಭದ್ರತೆಯನ್ನು ಒದಗಿಸುವ ಸಿಬ್ಬಂದಿಯ ಕುಟುಂಬಗಳಿಗೆ ಸ್ಟ್ಯಾಂಡ್‌ನ ಒಂದು ವಿಭಾಗವನ್ನು ಕಾಯ್ದಿರಿಸಲಾಗಿದೆ. ನಾಗ್ಪುರದಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ವೇಳೆಯೂ ಮೈದಾನ ಪ್ರೇಕ್ಷಕರಿಂದ ತುಂಬಿತ್ತು.