ಅಭಿಷೇಕ್, ಅವಿವಾಗೆ ತೊಡಿಸಿದ ಉಂಗುರದ ಬೆಲೆ ಎಷ್ಟು ಲಕ್ಷ

ಅಂಬರೀಶ್-ಸುಮಲತಾ ಪುತ್ರ, ಸ್ಯಾಂಡಲ್‌ವುಡ್‌ನ ಸ್ಟಾರ್ ಯುವನಟ ಅಭಿಷೇಕ್ ಅಂಬರೀಶ್ ನಿನ್ನೆಯಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜನಪ್ರಿಯ ಉಡುಪು ವಿನ್ಯಾಸದ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಟ್ಟಿಗೆ ಅಭಿಷೇಕ್ ವಜ್ರದ ಉಂಗುರ ಬದಲಾಯಿಸಿಕೊಂಡಿದ್ದು ಶೀಘ್ರದಲ್ಲಿಯೇ ಇಬ್ಬರ ವಿವಾಹ ನಡೆಯಲಿದೆ. ಅಭಿಷೇಕ್ ಅವರು ಅವಿವಾಗೊಸ್ಕರ ಪೂಣೆಯಿಂದ ಸ್ಪೆಷಲ್ ಡೈಮಂಡ್ ರಿಂಗ್ ರೆಡಿ ಮಾಡಿಸಿದ್ದಾರೆ. ಈ ರಿಂಗ್ನ ಬೆಲೆ ಬರೋಬ್ಬರಿ 37 ಲಕ್ಷ ರೂ. ಆಗಿದೆಯಂತೆ