ಟಿಕೆಟ್​ ಹಂಚಿಕೆ ಬಗ್ಗೆ ಖಡಕ್ ಸೂಚನೆಗಳನ್ನು ನೀಡಿದ ಅಮಿತ್ ಷಾ

ಟಿಕೆಟ್​ ಹಂಚಿಕೆ ಬಗ್ಗೆ ಖಡಕ್ ಸೂಚನೆಗಳನ್ನು ನೀಡಿದ ಅಮಿತ್ ಷಾ

ಬೆಂಗಳೂರು: ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಖಡಕ್ ಸೂಚನೆ ನೀಡಿದ್ದು ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದಿದ್ದಾರೆ.

ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತನಾಡಿದ ಅಮಿತ್ ಷಾ, 'ಅಭ್ಯರ್ಥಿಗಳ ಆಯ್ಕೆ ನಮಗೆ ಬಿಡಿ.

ಅಭ್ಯರ್ಥಿಗಳ ಅಯ್ಕೆ ಬಗ್ಗೆ ಈಗಾಗಲೇ ನಮ್ಮ ಬಳಿ ಸರ್ವೆ ವರದಿ ಇದೆ. ಸರ್ವೆ ವರದಿ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಅದು ಶಾಸಕರಿರಲಿ ಅಥವಾ ಮುಖಂಡರಿರಲಿ' ಎಂದು ಅಮಿತ್ ಷಾ ಹೇಳಿದ್ದಾರೆ. ಈ ಮೂಲಕ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಬಹುದು ಎನ್ನುವ ಸುಳಿವನ್ನು ಅಮಿತ್ ಷಾ ನೀಡದ್ದಾರೆ.

'ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಪಕ್ಷ ಬಿಟ್ಟುಹೋಗುವವರನ್ನು ಮನವೊಲಿಸುವಂತೆ ಸೂಚನೆ ನೀಡಿರುವ ಷಾ ಪ್ರಚಾರದ ಕಡೆ ನೀವು ಗಮನ ಹರಿಸಲು ಹೇಳಿದ್ದಾರೆ. ಅದಲ್ಲದೇ ಚುನಾವಣೆ ವೇಳೆ ಯಾವುದೇ ಕಾರಣಕ್ಕೂ ವಿವಾದಕ್ಕೆ ಸಿಲುಕದಂತೆ ಹಾಗೂ ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.