ಉಸ್ತುವಾರಿ ಸಚಿವರ ಕ್ಷೇತ್ರದ ರಸ್ತೆ ಅವ್ಯವಸ್ಥೆ : ಪ್ರತಿಭಟನೆ ಟಿಪ್ಪರ್ ಲಾರಿಗಳ ಟೈಯರ್ ಗಾಳಿ ತೆಗೆದು ಆಕ್ರೋಶ

ಕೋಳಿವಾಡ -ಶಿರಹಟ್ಟಿ ರಸ್ತೆ ಅವ್ಯವಸ್ಥೆ ಖಂಡಿಸಿ ಕುಮಾರವ್ಯಾಸನ ಜನ್ಮಸ್ಥಳ ಕೋಳಿವಾಡ ಗ್ರಾಮದಲ್ಲಿಂದು ಗ್ರಾಮಸ್ಥರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಪ್ರತಿನಿಧಿಸುವ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಈ ರಸ್ತೆ ಬರುವುದಲ್ಲದೇ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾವನವರ ಊರು ಕೋಳಿವಾಡ ವಾಗಿದೆ ಎಂಬುದು ಮಹತ್ವ ಪಡೆದಿದೆ.ಕೋಳಿವಾಡ್ ಕ್ರಾಸ್ನಿಂದ ಚಿಂಚಲಿಯವರಿಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳೇ ಇದ್ದಿದ್ದು ದ್ವಿಚಕ್ರ ವಾಹನಗಳು ಸಂಚರಿಸುವುದೇ ದುಸ್ತರ ವಾಗಿದ್ದು, ಸಾರಿಗೆ ಸಂಸ್ಥೆಯ ಬಸ್ಗಳನ್ನೇ ಈ ಮಾರ್ಗದಲ್ಲಿ ಓಡಿಸುವುದಿಲ್ಲ ಎಂದು ಹೇಳುವ ಮಟ್ಟಕ್ಕೆ ಬಂದಿದೆ.ಎಂ ಸ್ಯಾಂಡ್, ಕಲ್ಲಿನ ಕಡಿ, ಮರುಳು ಸಾಗಾಟದ ಲಾರಿಗಳು ಇಪ್ನತ್ನಾಲ್ಕು ಗಂಟೆ ಓಡಾಡುತ್ತಿದ್ದು ರಸ್ತೆಗಳು ಗುಂಡಿ ಬೀಳಲು ಇದೇ ಕಾರಣವಾಗಿದೆ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದಲ ಹಿನ್ನೆಲೆಯಲ್ಲಿ ಕೋಳಿವಾಡ ಪಂಚಾಯತಿ ಎದುರು ಮುಖ್ಯ ರಸ್ತೆಯಲ್ಲಿ ನೂರಾರು ಗ್ರಾಮಸ್ಥರು ವಾಹನಗಳನ್ನು ತಡೆದು ಟಿಪ್ಪರ್ ಲಾರಿಗಳ ಚಕ್ರದ ಗಾಳಿಯನ್ನು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮ ಪಂಚಾಯತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದರೂ ಯಾವುದೇ ಲಕ್ಷ್ಯ ವಹಿಸಿಲ್ಲ ಎಂದು ರೊಚ್ಚಿಗೆದ್ದ ಪಂಚಾಯತಿ ಸದಸ್ಯರು, ಯುವಕರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.