ಬೆಂಗಳೂರಲ್ಲಿ ಜನರು ನೈಟ್ ಕಫ್ರ್ರ್ಯೂ ಪಾಲಿಸದಿದ್ದರೆ ಕಠಿಣ ಕ್ರಮ : ಗೌರವ ಗುಪ್ತ

ಬೆಂಗಳೂರಲ್ಲಿ ಜನರು ನೈಟ್ ಕಫ್ರ್ರ್ಯೂ ಪಾಲಿಸದಿದ್ದರೆ ಕಠಿಣ ಕ್ರಮ : ಗೌರವ ಗುಪ್ತ
ಬೆಂಗಳೂರು: ನಗರದಲ್ಲಿ ನೈಟ್ ಕಫ್ರ್ಯೂ ಸಂದರ್ಭದಲ್ಲಿ ೯ ಗಂಟೆ ಒಳಗಡೆ ಎಲ್ಲಾ ಶಾಪ್ಗಳನ್ನು ಕ್ಲೋಸ್ ಮಾಡಬೇಕು ಎಂದು ಬಿಬಿಎಂಪಿ ಕಮಿಷನರ್ ಗೌರವ ಗುಪ್ತ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗಡಿಗಳನ್ನು ಮುಚ್ಚುವ ಬಗ್ಗೆ ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳು ಕಠಿಣ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಯಾರು ರಾತ್ರಿ ೯ ಗಂಟೆ ಮೇಲೆ ಶಾಪ್ ಓಪನ್ ಮಾಡುತ್ತಾರೊ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ಬಾರ್ ಅಂಡ್ ರೆಸ್ಟೋರೆಂಟ್ ರಾತ್ರಿ ೭ ಗಂಟೆಗೆ ಕ್ಲೋಸ್ ಮಾಡುವ ಬಗ್ಗೆ ಯಾವುದೇ ಚರ್ಚೆ ಬಂದಿಲ್ಲ. ಮುಂದೆ ಹಬ್ಬಗಳು ಇವೆ. ಹೀಗಾಗಿ ನಾವು ಕೊರೊನಾ ಎಲ್ಲಿಂದ ಉದ್ಭವ ಆಗುತ್ತದೆಯೋ ಅದರ ಬಗ್ಗೆ ಸಹ ಚೆಕ್ ಮಾಡುತ್ತೇವೆ.
ಹೆಚ್ಚಿನ ಕೇಸ್ಗಳು ಹೊರವಲಯದಿಂದ ಬಂದಿವೆ. ಮಹದೇವಪುರ, ಬೊಮ್ಮನಹಳ್ಳಿಯ ಕೆಲ ಪ್ರದೇಶಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ತೇವೆ ಎಂದು ಹೇಳಿದರು.ಲಸಿಕೆ ಅಭಾವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಗುರಿಯಷ್ಟು ಕೊರೊನಾ ಲಸಿಕೆ ಬಿಬಿಎಂಪಿಗೆ ಸಿಗುತ್ತಿಲ್ಲ. ಇಂದು ಈ ಕುರಿತು ಸಭೆ ಇದೆ. ಲಭ್ಯತೆಗೆ ಅನುಸಾರವಾಗಿ ಲಸಿಕೆ ಬೇಕಿದೆ.
ಸಿಟಿಯಲ್ಲಿ ೭೦% ಜನರು ಲಸಿಕೆ ಪಡೆದುಕೊಂಡಿದ್ದಾರೆ. ಎರಡನೆ ಡೋಸ್ ಲಸಿಕೆ ಪಡೆಯುತ್ತಿದ್ದಾರೆ. ಎಲ್ಲಿ ಜನರು ಲಸಿಕೆಗಾಗಿ ಕ್ಯೂ ನಿಂತಿದ್ದಾರೋ ಅದನ್ನು ನಮ್ಮ ಗಮನಕ್ಕೆ ತನ್ನಿ. ನಮಗೆ ದಿನಕ್ಕೆ ೩೦ ಸಾವಿರ ಮಾತ್ರ ಲಸಿಕೆ ಸಿಗ್ತಿದೆ. ಕನಿಷ್ಠ ನಾವು ೭೦% ಜಾಸ್ತಿ ಮಾಡಿದರೆ ಒಳ್ಳೆಯದು. ಹೀಗಾಗಿ ಸರ್ಕಾರದ ಮುಂದೆ ಲಸಿಕೆಗೆ ಬೇಡಿಕೆ ಇಟ್ಟಿದ್ದೇವೆ. ದಿನಕ್ಕೆ ೧ ಲಕ್ಷ ಲಸಿಕೆ ಬೇಕು ಎಂದು ಗೌರವ್ ಗುಪ್ತ ಹೇಳಿದರು.