'ಸಿದ್ಲಿಂಗು' ಚಿತ್ರ ಖ್ಯಾತಿಯ ನಟಿ 'ಸುಮನ್ ರಂಗನಾಥ್' ತಾಯಿ ಇನ್ನಿಲ್ಲ
ಬೆಂಗಳೂರು : ಸಿದ್ಲಿಂಗು, ನೀರ್ ದೋಸೆ ಖ್ಯಾ ತಿಯ ಬಹುಭಾಷಾ ನಟಿ ಸುಮನ್ ರಂಗನಾಥ್ ತಾಯಿ ಜ್ರೋತಿ (81) ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜ್ಯೋತಿ ಅವರು ಇತ್ತೀಚೆಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು.
ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ನಂತರ ನಿವೃತ್ತಿಯಾಗಿದ್ದ ಜ್ಯೋತಿ 1970 ರಲ್ಲಿ ರಂಗನಾಥನ್ ಅವರನ್ನು ವಿವಾಹವಾಗಿದ್ದರು. ನೀರ್ ದೋಸೆ ಖ್ಯಾ ತಿಯ ಬಹುಭಾಷಾ ನಟಿ ಸುಮನ್ ರಂಗನಾಥ್ ಇದೀಗ ತನ್ನ ತಾಯಿ ಕಳೆದುಕೊಂಡು ದುಃಖದಲ್ಲಿದ್ದಾರೆ.
ಸುಮನ್ ರಂಗನಾಥ್ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಳಿ ಮತ್ತು ಭೋಜಪುರಿ ಭಾಷೆಯ ಸುಮಾರು ೫೦ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀಧರ್ ಅಭಿನಯದ ಸಂತ ಶಿಶುನಾಳ ಶರೀಫ್ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮನ್ ತದನಂತರದಲ್ಲಿ ವಿಷ್ಣುವರ್ಧನ್, ಮಿಥುನ್ ಚಕೃವರ್ತಿ, ಅಂಬರೀಶ್, ಶಂಕರ್ ನಾಗ್, ವಿನೋದ್ ಆಳ್ವ, ರಮೇಶ್ ಅರವಿಂದ್, ವಿಜಯಕಾಂತ್ ಮುಂತಾದ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ.
ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮನ್ ಸಿದ್ಲಿಂಗು ಚಿತ್ರದ ಅಭಿನಯಕ್ಕಾಗೆ ಫಿಲ್ಮಫೇರ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.