ನವಲಗುಂದ ಕ್ಷೇತ್ರದ “ಅಸಲಿ ಜೋಡೆತ್ತುಗಳು” ಬೆಂಗಳೂರಲ್ಲಿ

ನವಲಗುಂದ ಕ್ಷೇತ್ರದ “ಅಸಲಿ ಜೋಡೆತ್ತುಗಳು” ಬೆಂಗಳೂರಲ್ಲಿ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿರುವ ಅಸಲಿ ಜೋಡೆತ್ತುಗಳೆಂದೆ ಗುರುತಿಸಿಕೊಂಡಿರುವ ಇಬ್ಬರು ನಾಯಕರು ರಾಜಧಾನಿಯಲ್ಲಿ ಪ್ರಮುಖ ನಾಯಕರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನವಲಗುಂದ ಕ್ಷೇತ್ರದಲ್ಲಿ ಯಾವುದೇ ರಾಜಕಾರಣದ ಹಿನ್ನೆಲೆ ಇಲ್ಲದ ಕಲ್ಲಪ್ಪ ನಿಂಗಪ್ಪ ಗಡ್ಡಿ ಅವರು, ರಾಜ್ಯದ ಮಂತ್ರಿಯಾಗಿದ್ದವರು. ಹಾಗೇನೇ ಯಾವುದೇ ಪ್ರಮುಖ ರಾಜಕಾರಣಿಯ ಬೆಂಬಲವಿಲ್ಲದೇ ಜಿಲ್ಲೆಯ ಜಿಪಂ ಉಪಾಧ್ಯಕ್ಷರಾಗಿದ್ದು ಶಿವಾನಂದ ಕರಿಗಾರ ಎಂಬುದು ನವಲಗುಂದ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಹಾಗಾಗಿಯೇ, ಇವರಿಬ್ಬರು ಒಂದಾಗಿ ಮುನ್ನಡೆಯುತ್ತಿದ್ದಾರೆ.

ನವಲಗುಂದ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ ಕೆ.ಎನ್.ಗಡ್ಡಿ ಅಥವಾ ತಮಗೆ ಟಿಕೆಟ್ ಪಡೆಯಲು ಶಿವಾನಂದ ಕರಿಗಾರ ಹಲವು ಕಾಂಗ್ರೆಸ್ ನಾಯಕರನ್ನ ಈಗಿಂದಲೇ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಡಾಂಭಿಕತೆಯಿಲ್ಲದ ಇಬ್ಬರು ಜನರನ್ನ ಸುಳ್ಳೆ ಸುಳ್ಳು ಭರವಸೆಯಿಂದ ಯಾಮಾರಿಸುವ ಜಾಯಮಾನ ಹೊಂದಿಲ್ಲ. ಇಂಥವರಿಗೆ ಪಕ್ಷವೂ ಮಣೆ ಹಾಕಿದರೇ, ಭವಿಷ್ಯವಿದೆ ಎಂದು ಹೇಳಲಾಗುತ್ತಿದೆ.