ನಿಲ್ಲದ ಹಿಜಾಬ್ ವಿರೋಧಿ ಪ್ರತಿಭಟನೆ: ಹುಟ್ಟುಹಬ್ಬಕ್ಕೂ ಮುನ್ನ ಪೊಲೀಸ್ ಕಸ್ಟಡಿಯಲ್ಲಿ ಕೊನೆಯುಸಿರೆಳೆದ ಇರಾನ್‌ನ ಸೆಲೆಬ್ರಿಟಿ ಚೆಫ್ ʻಜೇಮಿ ಆಲಿವರ್

ನವದೆಹಲಿ: ಇರಾನ್‌ನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಹೋರಾಟವು ಏಳನೇ ವಾರಕ್ಕೆ ಕಾಲಿಟ್ಟಿದೆ. ದೇಶಾದ್ಯಂತ ನಡೆದ ಪ್ರದರ್ಶನದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ 19 ವರ್ಷದ ಸೆಲೆಬ್ರಿಟಿ, ಮೆಹರ್ಷಾದ್ ಶಾಹಿದಿ ಅವರು ಅಕ್ಟೋಬರ್ 26, 2022 ರ ಬುಧವಾರದಂದು ಪೊಲೀಸ್ ಕಸ್ಟಡಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ
ಇರಾನ್‌ನ ಜೇಮಿ ಆಲಿವರ್ಎಂ ದೂ ಕರೆಯಲ್ಪಡುವ ಸೆಲೆಬ್ರಿಟಿ ಚೆಫ್ ಶಾಹಿದಿ, ನಲ್ಲಿ 25,000 ಅನುಯಾಯಿಗಳನ್ನು ಹೊಂದಿದ್ದರು ಮತ್ತು ಸ್ವತಃ ಅಡುಗೆ ಮಾಡುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ, ಅವರು ತಮ್ಮ 20 ನೇ ಹುಟ್ಟುಹಬ್ಬದ ಒಂದು ದಿನದ ಮೊದಲು ನಿಧನರಾದರು.
ಅವನ ಕುಟುಂಬದ ಪ್ರಕಾರ, ಶಾಹಿದಿ ತಲೆಬುರುಡೆಗೆ ಪೆಟ್ಟು ಬಿದ್ದ ನಂತರ ಸಾವನ್ನಪಪಿದ್ದಾನೆ. ಅವರನ್ನು ಅರೆಸ್ಟ್ ಮಾಡಿದ ನಂತ್ರ ಲಾಠಿ ಏಟಿನ ಪರಿಣಾಮವಾಗಿ ನಮ್ಮ ಮಗ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ಇರಾನ್ ಅಧಿಕಾರಿಗಳುಜೇಮಿಯನ್ನು ಕಸ್ಟಡಿಯಲ್ಲಿ ಕೊಂದ ಆರೋಪವನ್ನು ತಳ್ಳಿಹಾಕಿದ್ದು, ಅವನ ಸಾವಿಗೆ ಕಾರಣವನ್ನು ನಂತರ ಘೋಷಿಸಲಾಗುವುದು ಎಂದು ಹೇಳಿದರು.