ಪರಿಸರ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಬಾಂಬುಲೆ-ಸರ್ಕಾರದಿಂದ ಬೇಕಿದೆ ಸಹಕಾರ

ಹುಬ್ಬಳ್ಳಿ : ಇಂದಿನ ತಾಂತ್ರಿಕ ಯುಗದಲ್ಲಿ ಬಹುತೇಕ ಯವಕರು ಮೋಬೈಲ್ ಗೀಳಿನಲ್ಲಿದ್ದಾರೆ. ಊಟ ತಿಂಡಿ ಕಾಲೇಜು ಯಾವುದೂ ಬೇಡ, ಕೈಯಲ್ಲಿ ಮೊಬೈಲ್ ಕಿವಿಯಿಂದ ಕತ್ತಿನವರೆಗೆ ಇಯರ್‌ಪಾಡ್ಸ್ ಇದ್ದರೆ ಸಾಕು ತಂದೆ ತಾಯಿ ಆಡಿದ ಅಣ್ಣ ತಂಗಿ ಯಾರಗೊಡವೆಯೂ ಬೇಡ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಮಾತ್ರ ತನ್ನ ಜೀವನವನ್ನೇ ಪರಿಸರ ಉಳಿವಿಗಾಗಿ ಶ್ರಮಿಸುತ್ತಿದ್ದು, ಈವರೆಗೆ ಲಕ್ಷಾಂತರ ಗಿಡಗಳನ್ನು ಬೆಳೆಸಿದ್ದಾರೆ. ಹಾಗಾದರೆ ಈ ಪರಿಸರ ಪ್ರೇಮಿ ಯಾರು ಅಂತೀರಾ ಇಲ್ಲಿದೆ ನೋಡಿ...
ಹೌದು, ಹೀಗೆ ತಮ್ಮ ವಾಹನದಲ್ಲಿ ಸಸಿಗಳನ್ನು ಇಟ್ಟುಕೊಂಡು ರೈತರಿಗೆ ನೀಡುತ್ತಿರುವ ಈ ಪರಿಸರ ಪ್ರೇಮಿಯ ಹೆಸರು ಜಯವಂತ ಬಾಂಬುಲೆ ಅಂತ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದವರು. ಬಾಂಬುಲೆ ಅಪ್ಪಟ ಪರಿಸರ ಪ್ರೇಮಿ, ಪರಿಸರ ಪ್ರೇರಕ, ತಂದೆ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರೇ, ಇದೀಗ ಮಗ ನಿಸರ್ಗ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇನ್ನು ಜಯವಂತ ಬಾಂಬುಲೆ ಬಡತನದ ಬೆಂಕಿಯಲ್ಲಿ ಬೆಂದು ಎಸ್.ಎಸ್.ಎಲ್,ಸಿ ವಿದ್ಯಾಬ್ಯಾಸಕ್ಕೆ ಮಂಗಳಹಾಡಿದರು. ಮುಂದಿನ ತಮ್ಮ ಜೀವನದ ಬಂಡಿಯನ್ನು ಸಾಗಿಸಲು ಸಾಮಾಜಿಕ ಅರಣ್ಯ ಧಾರವಾಡ ವಿಭಾಗದ ಕಲಘಟಗಿ ವಲಯದಲ್ಲಿ ಕೇವಲ 250 ರೂ ಗೆ ಅರಣ್ಯ ಪ್ರೇರಕರಾಗಿ ಸೇವೆ ಪ್ರಾರಂಭಿಸಿದರು. ಈ ಕೆಲಸವನ್ನು ಯಾವುದೇ ಸ್ವಾರ್ಥವಿಲ್ಲದೇ ಕಳೆದ 35 ವರ್ಷಗಳಿಂದ ಮಾಡುತ್ತಿದ್ದು, ಇದರ ಜೊತೆಗೆ ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಬೈಕ್ ಮೂಲಕ ಸಂಚರಿಸಿ ನಿರಂತರ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಇದಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಈವರ ಸಾಧನೆಗೆ ಅನೇಕ ಪ್ರಶಸ್ತಿಗಳು ಮೂಡಿಗೆರಿವೆ. ಇಲಾಖೆಯ ಅನೇಕ ಯೋಜನೆಗಳ ಅಡಿ ಅರಣ್ಯ ಆಧಾರಿತ ಎರಡು ಲಕ್ಷಕ್ಕೂ ಹೆಚ್ಚು ಸಸಿಗಳು ಇವರಿಂದ ನೆಡಿಸಲ್ಪಟ್ಟು ಈಗ ಹೆಮ್ಮರವಾಗಿ ಬೆಳೆದು ನಿಂತಿವೆ. ವಿಪರ್ಯಾಸ ಎಂದರೆ ಪರಿಸರ ರಕ್ಷಣೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಇವರಿಗೆ ಇಲ್ಲಿಯವರೆಗೂ ಸೇವಾ ಭದ್ರತೆ ಇಲ್ಲ. ಇವರು ನಿವೃತ್ತಿ ಹೊಂದಲು ಕೇವಲ ಎರಡು-ಮೂರು ತಿಂಗಳುಗಳು ಇದ್ದು, ಈ ದಿಸೆಯಲ್ಲಿ ಕನಿಷ್ಠ ಪಕ್ಷ ವಯಸ್ಸಾದ ಕಾಲಕ್ಕೆ ಜೀವನ ನಡೆಸಲು ಸೇವೆ ಮುಗಿದ ನಂತರವಾದರು ನಿವೃತ್ತಿ ವೇತನವಾದರೂ ಸರ್ಕಾರ ನೀಡಲಿ ಎಂದು ತಮ್ಮ ನೋವು ತೊಡಿಕೊಳ್ಳತ್ತಾರೆ ಪರಿಸರ ಪ್ರೇಮಿ ಜಯವಂತ ಬಾಂಬುಲೆ.
ಈ ದಿಸೆಯಲ್ಲಿ ಜಯವಂತ ಬಾಂಬುಲೆ ಅನೇಕ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಭೇಟಿಯಾಗಿದ್ದಾರೆ ಆದರೂ ಕೂಡ ಯಾವುದೆ ಪ್ರಯೋಜನವಾಗಿಲ್ಲ. ಕನಿಷ್ಠಪಕ್ಷ ಇವರ ಅಪರೂಪದ ತ್ಯಾಗದ ಸೇವೆಗೆ ಮನವೊಲಿದು ಸರಕಾರ ನಿವೃತ್ತಿ ವೇತನವಾದರು ಸರ್ಕಾರ ನೀಡಲಿ ಎಂಬುದೇ ಸಾರ್ವಜನಿಕ ಆಶಯ
ನವೀನ್ ಸೋಲಾರಗೊಪ್ಪ ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ