ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಹುಬ್ಬಳ್ಳಿ ಬಾಲಕನ ಹೆಸರು

ಹುಬ್ಬಳ್ಳಿ : ಸಾಮಾನ್ಯವಾಗಿ ಸಣ್ಣ ಮಕ್ಕಳು ಮಾತನಾಡುವುದನ್ನೇ ಆ ಮಗುವಿನ ಮನೆಯವರು ದೊಡ್ಡ ಸಾಧನೆ ಅಂದುಕೊಂಡಿರ್ತಾರೆ. ಆದರೆ ಇಲ್ಲೊಬ್ಬ ಎರಡು ವರ್ಷದ ಬಾಲಕ ತನ್ನ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ದಮಾಡಿದ್ದಾನೆ.ಹಾಗಾದ್ರೆ ಯಾರು ಆ ಸಾಧಕ ಬಾಲಕ ಅಂತಿರಾ ಈ ಸ್ಟೋರಿ ನೋಡಿ
ಹೌದು, ಹೀಗೆ ಸುಲಲಿತವಾಗಿ ದೇಶದ ರಾಜ್ಯಗಳ ರಾಜಧಾನಿಗಳ ಹೆಸರು ಹೇಳುತ್ತಿರುವ ಪುಟ್ಟ ಪೋರನ ಹೆಸರು ಅರ್ಥವ್. ಸಣ್ಣ ವಯಸ್ಸಿನಲ್ಲೇ ಸಮಾನ್ಯ ಜ್ಞಾನ, ತಿಂಗಳು, ವಾರ, ಜ್ಞಾನಪೀಠ ಪುರಸ್ಕೃತರ ಹೆಸರು, ಇಂಗ್ಲೀಷ್ ರೈಮ್ಸ್, ಆಕ್ಷನ್ ವರ್ಡ್ ಹೀಗೆ ಸಾಕಷ್ಟು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದ್ದಾನೆ. ಈತ ಶಿರೂರ ಪಾರ್ಕನ ಪ್ರತಿಭಾ ಮತ್ತು ಶರಣ್ ದಂಪತಿಯ ಪುತ್ರನಾಗಿದ್ದು, ಇದೀಗ ಇವನಿಗೆ ಕೇವಲ ಎರಡು ವರ್ಷ ಆಗಿದೆ. ಆದರೆ ಅಥರ್ವ ಜ್ಞಾನ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈತನ ಹೆಸರು ಸೇರ್ಪಡೆಯಾಗಿದೆ.
ಅರ್ಥವ ಏನೇ ಹೇಳಿಕೊಟ್ಟರು ಅದನ್ನು ಮನಸ್ಸಲ್ಲಿ ಅಚ್ಚಳಿಯದಂತೆ ಹಚ್ಚೆ ಹಾಕಿಸಿಕೊಳ್ಳುವ ರೀತಿಯಲ್ಲಿ ಜತನ ಮಾಡಿಕೊಂಡು ಕಲಿಯುತ್ತಿದ್ದ. ಆ ಬಳಿಕ ಆತನೇ ಪೋಷಕರಿಗೆ ಅದನ್ನು ನೆನಪಿಸುತ್ತಿದ್ದ. ಇದನ್ನು ಗಮನಿಸಿದ ಪೋಷಕರು ತಮ್ಮ ಮಗನಲ್ಲಿರುವ ವಿಶೇಷ ಜ್ಞಾನಕ್ಕೆ ನೀರೆರೆಯಲು ತೀರ್ಮಾನ ಮಾಡಿದ್ದಾರೆ. ಅಂದಿನಿಂದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ ಮತ್ತು ಅರ್ಥವ್ ಕೂಡ ಅದನ್ನು ಮರೆಯದೇ ಹಾಗೆಯೇ ಹೇಳಿದ್ದಾನೆ.ಈತನ ಬುದ್ದಿಮಟ್ಟ ಕಂಡು ನಮಗೆ ಖುಷಿಯಾಗಿದೆ. ಅಲ್ಲದೇ ಆತನ ನೆನಪಿನ ಶಕ್ತಿ ಕಂಡು ಖುಷಿಯಾಗಿದೆ ಅಂತಾ ಹುಬ್ಬಳ್ಳಿಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅರ್ಥವ್ ಎಷ್ಟು ಚೂಟಿ ಇದ್ದಾನೆ ಎಂದರೆ ಒಂದೇ ಕಡೆ ಗಮನ ಕೊಡುವುದಿಲ್ಲ. ಬದಲಾಗಿ ಒಂದೇ ಬಾರಿಗೆ ಬೇರೆ ಬೇರೆ ಕಡೆ ಗಮನ ಹರಿಸುತ್ತಾನೆ. ಏನೇ ಕೇಳಿದರೂ ಅರಳು ಹುರಿದಂತೆ ಪಟಪಟನೇ ಉತ್ತರ ಕೊಡುತ್ತಾನೆ. ಸದ್ಯ ಬಾಲಕನ ಬುದ್ಧಿಶಕ್ತಿಗೆ ಮೆಚ್ಚಿ ಅವನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದು ಬಂದಿದೆ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನ ಅಥರ್ವ್ ಮಾಡಲಿ ಎನ್ನುವುದು ನಮ್ಮ ಆಶಯ.
ನವೀನ ಸೋಲಾರಗೊಪ್ಪ ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ