ಧಾರವಾಡದ ರಫೀಕ್ ಹೋಳಿಗೆ ಮತ್ತೊಂದು ಬಂಗಾರ ಪದಕ

ಇಂಟರ್ ಸರ್ವಿಸಸ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಪೈಲ್ವಾನ್. ಧಾರವಾಡದ ಹೆಮ್ಮೆಯ ಕುಸ್ತಿಪಟು ಸದ್ಯ ದೇಶದ ಸೇವೆಯಲ್ಲಿ ಕರ್ತವ್ಯ ಮಾಡುತ್ತಿರುವ ರಫೀಕ್ ಹೋಳಿ ಅವರು ಮತ್ತೊಂದು ಬಂಗಾರದ ಪದಕ ಗೆಲ್ಲುವ ಮೂಲಕ ಧಾರವಾಡಕ್ಕೆ ಮತ್ತೊಂದು ಗರಿ ತಂದಂತಾಗಿದೆ. ಹೌದು ದೆಹಲಿಯಲ್ಲಿ ಆರಂಭಗೊಂಡ ಇಂಟರ್ ಸರ್ವೀಸಸ್ ಕುಸ್ತಿ ಚಾಂಪಿಯನ್ ಶಿಪ್ ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ತನ್ನ ಎದುರಾಳಿಯನ್ನು ಮನಿಸುವ ಮೂಲಕ ರಫೀಕ ಬಂಗಾರದ ಪದಕ ಮುಡಿಗೆರಿಸಿಕೊಂಡರು. ಇನ್ನು ಭಾರತೀಯ ಸೈನ್ಯದಲ್ಲಿ ಕರ್ತವ್ಯ ಸೇವೆ ಸಲ್ಲಿಸುತ್ತಿದ್ದರು ಕೂಡ ಕುಸ್ತಿಯನ್ನು ಆಡುವುದನ್ನು ಬಿಟ್ಟಿಲ್ಲಾ. ದೆಹಲಿಯಲ್ಲಿನ ಪಂದ್ಯಾವಳಿಯಲ್ಲಿ ಪಾಲ್ಗೊಂಡು 77, ಕೆಜಿ ಪುರಷರ ವಿಭಾಗದ ನಡೆದ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದಿದ್ದಾರೆ. ಈ ಟೊರ್ಣಿಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಕುಸ್ತಿಪಟುಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಲಗ್ಗೆ ಇಟ್ಟ ರಫಿಕ್ ಹೋಳಿ ಅಲ್ಲಿ ಎದುರಾಳಿಯನ್ನು ಮಣಿಸುವ ಮೂಲಕ ಬಂಗಾರದ ಪದಕ ತನ್ನದಾಗಿಸಿಕೊಂಡರು ಧಾರವಾಡದ ಕೀರ್ತಿ ಮತ್ತಷ್ಟು ಹೆಚ್ಚಿಸಿದ್ದಾರೆ.