ಕಾಂಗ್ರೆಸ ಮಹಿಳಾ ಪ್ರತಿಭಟನೆ
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿಕೆ ಖಂಡಿಸಿ ಕೊಪ್ಪಳದಲ್ಲಿ ಇಂದು ಕಾಂಗ್ರೆಸ್ ಮಹಿಳಾ ಘಟಕದಿಂದ ಕಟೀಲ್ ಬಾಯಿ ತೊಳೆದುಕೊಳ್ಳುಲು ಅಂಚೆಕಚೇರಿ ಮೂಲಕ ಫಿನಾಯಿಲ್ ಬಾಟಲಗಳ ರವಾನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು ಈ ಕುರಿತು ಮಾತನಾಡಿದ ಕಾಂಗ್ರೆಸ ನ ಮಹಿಳಾ ಕಾರ್ಯಕರ್ತೆ ಜ್ಯೋತಿ ಗೊಂಡಬಾಳ, ಕಟೀಲ್ ಅವರೇ ಮೊದಲು ನಿಮ್ಮ ಹೊಲಸು ಬಾಯಿಯನ್ನು ತೊಳೆದುಕೊಳ್ಳಿ ಅದು ದುರ್ನಾತದಿಂದ ಕೂಡಿದೆ. ಬಿಜೆಪಿಯ ಸಾಧನೆ ಏನು ಎಂಬುದನ್ನು ಸಾಬೀತು ಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿನೂತನ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.