ತಡಕೋಡ ದೊಡ್ಡ ಕೆರೆ ಸ್ವಚ್ಛೆ, ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಸ್ವಚ್ಛೆ
ಕೊನೆಗೂ ಸ್ವಚ್ಚಗೊಳ್ಳುತ್ತಿರುವ ತಡಕೋಡ್ ಗ್ರಾಮದ ದೊಡ್ಡ ಕೆರೆ.ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಧಾರವಾಡ ತಾಲೂಕಿನ ತಡಕೋಡ್ ಗ್ರಾಮದ ದೊಡ್ಡ ಕೆರೆ ಸುತ್ತಮುತ್ತಲೂ ಗೀಡ ಕಂಟಿಗಳು ಬೆಳೆದುಕೊಂಡು ಸಾಕಷ್ಟು ತೊಂದರೆ ಉಂಟು ಮಾಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಈಗ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆಗೆ ಮುಂದಾಗಿದ್ದಾರೆ. ಹೌದು ತಡಕೋಡ್ ಗ್ರಾಮದ ಹೊರವಲಯದಲ್ಲಿರುವ ದೊಡ್ಡ ಕೆರೆಯು ಸುಮಾರು 100 ಎಕರೆಗೂ ಹೆಚ್ಚು ಪ್ರದೇಶವನ್ನು ಹೊಂದಿದ್ದು, ಗ್ರಾಮಸ್ಥರ ದನಕರುಗಳಿಗೆ ನೀರು ಕುಡಿಸಲು ಸೇರಿದಂತೆ ಇನ್ನತ್ತರ ಕೆಲಸಗಳಿಗೆ ತುಂಬಾ ಮಹತ್ವದ ಪಾತ್ರವಹಿಸುತ್ತಾ ಬಂದಿದೆ. ಹಾಗಾಗಿ ಗ್ರಾಮಸ್ಥರು ಕೆರೆಯ ಸ್ವಚ್ಚತೆಗೆ ಪಂಚಾಯತಿ ಸೇರಿದಂತೆ ಸಣ್ಣ ನೀರಾವರಿ ಇಲಾಖೆಗೂ ಮನವಿ ಮಾಡಿದ್ದರು. ಕೊನೆಗೂ ಈಗ ಗ್ರಾಮಸ್ಥರ ಒತ್ತಾಯದ ಮೇರೆಗೆ ಹಾಗೂ ಪಂಚಾಯತಿ ಸದಸ್ಯರ ಕಾಳಜಿಯೊಂದಿಗೆ ಗ್ರಾಮದ ಕೆರೆಯ ಸ್ವಚ್ಚತೆ ಮಾಡಲಾಗುತ್ತಿದೆ.