ರೈತರಿಗೆ ಉಪಯೋಗವಾಗುತ್ತಿಲ್ಲ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

ಅನ್ನದಾತ ದೇಶದ ಬೆನ್ನೆಲುಬು ಎಂದು ಬಾಯಿ ಮಾತಿನಲ್ಲಿ ಹೇಳುವ ಸರ್ಕಾರಗಳು ಈಗ ರೈತರ ಅಳಲನ್ನು ಕೇಳುವಲ್ಲಿ ವಿಫಲವಾಗಿವೆ. ಒಂದಾದ ಮೇಲೊಂದರಂತೆ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುವ ರೈತನ ಕಣ್ಣೀರು ಒರೆಸುವವರು ಯಾರು.? ಎಂಬ ಪ್ರಶ್ನೆ ಎದುರಾಗಿದೆ. ಮಳೆಯಿಲ್ಲದೇ ಬೆಳೆದ ಬೆಳೆಗಳು ಕೈ ಸೇರುತ್ತಿಲ್ಲ. ಅಲ್ಲದೇ ಬೆಳೆ ವಿಮೆ ಮಾಡಿಸಿದ ರೈತರಿಗೆ ಸರಿಯಾದ ಸಮಯಕ್ಕೆ ಬೆಳೆ ವಿಮೆ ಕೂಡ ಸಿಗುತ್ತಿಲ್ಲ. ಸರ್ಕಾರ ಬೆಳೆ ವಿಮೆ ಕಂಪನಿಗಳ ಪರ ನಿಂತಿವೆ ಎಂಬ ಮಾತುಗಳು ರೈತ ವಲಯದಿಂದ ಕೇಳಿ ಬರುತ್ತಿವೆ. ಇದರಿಂದ ಬೆಳೆ ವಿಮೆ ಮಾಡಿಸಿದ ರೈತ ಅತಂತ್ರನಾಗಿದ್ದಾನೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಂದ ಬೆಳೆ ಹಾನಿ, ಇನ್ನೊಂದು ಕಡೆ ಮಳೆ ಇಲ್ಲದೇ ಬೆಳೆಗಳು ಒಣಗಿವೆ. ಇದರಿಂದ ಅನ್ನದಾತನ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಇμÉ್ಟಲ್ಲ ಆದರೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಲಾಭವಾಗುತ್ತಿಲ್ಲ. ಬೆಳೆ ವಿಮೆ ನೀಡಲು ವಿಮೆ ಕಂಪನಿಗಳು ಹಿಂದೇಟು ಹಾಕುತ್ತಿದ್ದು, ಆದಷ್ಟು ಶೀಘ್ರ ಬೆಳೆ ವಿಮೆ ನೀಡಿ ಕಣ್ಣೀರು ಒರೆಸುವಂತೆ ರೈತರು ಆಗ್ರಹಿಸಿದ್ದಾರೆ.