ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ : ಏರ್‌ಪೋರ್ಟ್ನಲ್ಲಿ ವಶ

ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ : ಏರ್‌ಪೋರ್ಟ್ನಲ್ಲಿ ವಶ

ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ : ಏರ್‌ಪೋರ್ಟ್ನಲ್ಲಿ ವಶ
ಮಂಗಳೂರು : ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುವವನನ್ನು ಮಂಗಳೂರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಮತ್ತೊAದು ಪ್ರಕರಣವನ್ನೂ ಭೇದಿಸಿದ್ದಾರೆ. ಎರಡು ಪ್ರಕರಣಗಳಿಂದ ಬರೋಬ್ಬರಿ ೨೧ ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಬಂದಿದ್ದ ಮುರುಡೇಶ್ವರದ ವ್ಯಕ್ರಿಯೋರ್ವರು ಮಹಿಳೆಯ ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಕುರಿತು ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿಯ ಮೇರೆಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಹೇರ್ ಬ್ಯಾಂಡ್ ನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ೫,೫೮,೯೦೦ರೂಪಾಯಿ ಮೌಲ್ಯದ ೧೧೫ ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಚಿನ್ನ ಸಾಗಾಣಿಕೆ ಮಾಡಿದ ಮತ್ತೋರ್ವ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು. ಬಂಧಿತ ವ್ಯಕ್ತಿಯಿಂದ ಸುಮಾರು ೩೫೦ ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದಿದ್ದು, ಇದರ ಮೌಲ್ಯ ಸುಮಾರು ೧೬ ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.