ಅಫಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕದ ಐಪಿಎಸ್ ಅಧಿಕಾರಿ ಸವಿತಾ ಹಂದೆ

ಅಫಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕದ ಐಪಿಎಸ್ ಅಧಿಕಾರಿ ಸವಿತಾ ಹಂದೆ
ಬೆAಗಳೂರು: ಕರ್ನಾಟಕದ ಐಪಿಎಸ್ ಆಫೀಸರ್ ಸವಿತಾ ಹಂದೆ ಅವರು ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಸವಿತಾ ಅವರು ಕಾಬೂಲ್‌ನಲ್ಲಿ ವಿಶ್ವಸಂಸ್ಥೆ ಹಿರಿಯ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತಾಲಿಬಾನಿಗಳಿಂದಾಗಿ ಕಾಬೂಲ್‌ನಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ವಾತಾವರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.
ಸವಿತಾ ಅವರು ಸುರಕ್ಷಿತವಾಗಿದ್ದಾರೆ. ಸುರಕ್ಷಿತವಾಗಿ ಬರಲಿ' ಎಂದು ಅವರ ಬ್ಯಾಚ್‌ಮೇಟ್ ಬೆಂಗಳೂರು ಕಮಿಷನರ್ ಕಮಲ್ ಪಂತ್ ಪ್ರಾರ್ಥಿಸಿದ್ದಾರೆ.
ಸವಿತಾ ಹಂದೆ ೧೯೯೦ರ ಬ್ಯಾಚ್‌ನಲ್ಲಿ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಹಾಗೂ ಬೆಂಗಳೂರಿನ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರ ಐಪಿಎಸ್ ಬ್ಯಾಚ್‌ಮೇಟ್ ಕೂಡ ಆಗಿದ್ದರು.