ಕಟೀಲ್ ಕರಾವಳಿಗರ ಕಿವಿ ಮೇಲೆ ಮತ್ತೆ 'ಲವ್ ಜಿಹಾದ್' ಹೂ ಇಡಲು ಹೊರಟಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಕಟೀಲ್ ಕರಾವಳಿಗರ ಕಿವಿ ಮೇಲೆ ಮತ್ತೆ 'ಲವ್ ಜಿಹಾದ್' ಹೂ ಇಡಲು ಹೊರಟಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ

ಮಂಗಳೂರು : ನಳೀನ್ ಕುಮಾರ್ ಕಟೀಲ್ 'ಲವ್ ಜಿಹಾದ್' ಹೂವು ಇಡಲು ಹೊರಟಿದ್ದಾರೆ ಎಂದು ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.

ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ ಕಟೀಲ್ ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ಹೂವು ಇಡಲು ಹೊರಟಿದ್ದಾರೆ.

ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.